Thursday, December 5, 2024
spot_imgspot_img
spot_imgspot_img

ಕೊರೊನಾ ಟೆಸ್ಟ್ ವರದಿ ನೀಡಲು ವಿಳಂಬವೇಕೆ..? ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ.

- Advertisement -
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಬೆಂಗಳೂರು: ಕೊರೊನಾ ಟೆಸ್ಟ್ ವರದಿ ನೀಡಲು ವಿಳಂಬವೇಕೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವರದಿ ನೀಡಲು ತಡವಾಗುತ್ತಿರುವುದರಿಂದ ಬೇರೆಯವರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಹೈಕೋರ್ಟ್ ತಿಳಿಸಿದೆ.

ಸಿಜೆ ಎ.ಎಸ್.ಒಕಾ, ನ್ಯಾ.ಅರವಿಂದ್ ಕುಮಾರ್ ರವರ ಪೀಠ ವಿಚಾರಣೆ ನಡೆಸಿ,  ವಸತಿ ಸಮುಚ್ಛಯದ 14 ನ್ಯಾಯಾಧೀಶರು ಕ್ವಾರಂಟೈನ್ ಆಗಿದ್ದಾರೆ. ಜು.4ರಂದು ಕೊರೊನಾ ಟೆಸ್ಟ್ ಮಾಡಿಸಿದ್ರೂ ಇನ್ನೂ ವರದಿ ಬಂದಿಲ್ಲ. ಹೀಗಾಗಿ ಬೇರೆಯವರಿಗೂ ಕೂಡ ಕೊರೊನಾ ಸೋಂಕು ಹರಡುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸಾಮಾನ್ಯ ಜನರು ಕೊರೊನಾ ಟೆಸ್ಟ್ ಮಾಡಿಸಿದ್ರೆ ವರದಿ ಬರಲು ಎಷ್ಟು ಸಮಯ ಬೇಕು. ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ಎಷ್ಟು ಕಾಲಾವಕಾಶ ಬೇಕು ಎಂಬುದರ ಬಗ್ಗೆ ನಮಗೆ ವಿವರ ಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇದಲ್ಲದೇ, ಕೇಂದ್ರೀಕೃತ ವೆಬ್ ಸೈಟ್ ಆರಂಭಿಸಲು ಹೈಕೋರ್ಟ್ ಸಲಹೆ ನೀಡಿದೆ.

- Advertisement -

Related news

error: Content is protected !!