Friday, April 26, 2024
spot_imgspot_img
spot_imgspot_img

ಕೊರೊನಾ ಚಿಕಿತ್ಸೆಗೆ 9 ಲಕ್ಷ ಆಸ್ಪತ್ರೆ ಬಿಲ್​

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದು ಕೊರೊನಾ ಚಿಕಿತ್ಸೆಗೆ ₹9 ಲಕ್ಷ ಬಿಲ್​ ಮಾಡಿ, ಅದರ ಮೇಲೆ 1 ರೂಪಾಯಿ ರಿಯಾಯಿತಿ ನೀಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.


ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರನ್ನ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರ ಒಡೆತನದಲ್ಲಿರುವ ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಸಾವನ್ನಪ್ಪಿದ್ದಾರೆ. ಮೃತರ ಕುಟುಂದವರು ಆಸ್ಪತ್ರೆ ನೀಡಿದ ₹9,25,601 ಬಿಲ್​ ನೋಡಿ ಶಾಕ್​ ಆಗಿದ್ದು, ಬಳಿಕ ಪೂರ್ತಿ ಬಿಲ್​ ಕಟ್ಟಿದ್ದಾರೆ.


ಈ ವೇಳೆ ಆಸ್ಪತ್ರೆ 1 ರೂಪಾಯಿ ರಿಯಾಯಿತಿ ನೀಡಿದೆ. ಬಿಲ್​ ನೋಡಿ ಸಾರ್ವಜನಿಕರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಭಾರೀ ಬಿಲ್​​ ಕಟ್ಟಿ ಕಂಗಾಲಾಗಿರೋ ಮೃತರ ಕುಟುಂಬದವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಆಸ್ಪತ್ರೆಯವರು ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು, ಹೆಚ್ಚುವರಿ ಹಣವನ್ನ ಹಿಂದಿರುಗಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

- Advertisement -

Related news

error: Content is protected !!