Saturday, April 20, 2024
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸುನಾಮಿ 139 ಪಾಸಿಟಿವ್ ಪತ್ತೆ.8 ಜನ ಸಾವು.!!ರಾಜ್ಯದಲ್ಲಿ ಕೊರೊನಾ ಸೋಂಕು 2313 ಪತ್ತೆ. ಸಿಲಿಕಾನ್ ಸಿಟಿಯಲ್ಲಿ 1447 ಕೊರೊನಾ ಪಾಸಿಟಿವ್ ಪತ್ತೆ.

- Advertisement -G L Acharya panikkar
- Advertisement -

ಬೆಂಗಳೂರು : ಕೊರೊನಾ ಮಹಾಮಾರಿಯ ಇಂದು ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 1447 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಬೆಂಗಳೂರಿನಲ್ಲಿ ಕೊರೊನಾ ಸೊಂಕಿಗೆ 29 ಮಂದಿ ಇಂದು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ದಾಖಲೆ ಬರೆದಿದ್ದು, 2313 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 33418 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಂದೇ ದಿನ ಬರೋಬ್ಬರಿ 57 ಮಂದಿ ಸಾವನ್ನಪ್ಪಿದ್ದಾರೆ.

ಮಂಗಳೂರು : ದ.ಕ ಜಿಲ್ಲೆಯಲ್ಲಿ ಇಂದು ಮತ್ತೊಮ್ಮೆ ಕೊರೋನಾ ಮಹಾ ಸ್ಪೋಟ.!ಇಂದು  ಜಿಲ್ಲೆಯಲ್ಲಿ139 ಕೊರೊನಾ ಕೇಸ್ ಪತ್ತೆ. ಪ್ರಾಥಮಿಕ ಸಂಪರ್ಕದಿಂದ  ILI , SARI ಪ್ರಕರಣ , ಸಂಪರ್ಕಕ್ಕೆ ಸಿಗದ ಪ್ರಕರಣಗಳು, ಶಸ್ತ್ರಚಿಕಿತ್ಸೆ ಮಾಡೋ ಮೊದಲು ಜನರಿಗೆ ಕೊರೋನಾ‌ ಪಾಸಿಟಿವ್, ಅಂತರಾಷ್ಟ್ರೀಯ ಪ್ರಯಾಣದಿಂದ , ಅಂತರಾಜ್ಯ ಪ್ರಯಾಣ ದಿಂದ  ಪಾಸಿಟಿವ್ ಪತ್ತೆ ಆಗಿದೆ. ಕಳೆದೊಂದು ವಾರದಿಂದ ಕೊರೋನಾಕ್ಕೆ ಸಾವನ್ನಪ್ಪುವವರ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದ.ಕ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 38 ಕ್ಕೇರಿಕೆ ಆಗಿದೆ.
ಜಿಲ್ಲೆಯಲ್ಲಿ ಇಂದು ಕೊರೋನಾ ಮಹಾಮಾರಿ ಎಂಟು ಬಲಿ ಪಡೆದಿದೆ. 7 ಗಂಡಸರು ಮತ್ತು ಓರ್ವ ಮಹಿಳೆ ಕೊರೋನಾಗೆ ಬಲಿಯಾಗಿದ್ದಾರೆ.35, 48, 55, 57, 65, 67, 68 ವರ್ಷದ ಪುರುಷರು ಮತ್ತು 58 ವರ್ಷದ ವೃದ್ದೆ ಬಲಿ.

- Advertisement -

Related news

error: Content is protected !!