Saturday, April 20, 2024
spot_imgspot_img
spot_imgspot_img

ಭೂ ವೀಕ್ಷಣಾ ಉಪಗ್ರಹ ಇಒಎಸ್​-01 ಉಡಾವಣೆಗೆ ಕ್ಷಣಗಣನೆ

- Advertisement -G L Acharya panikkar
- Advertisement -

ಆಂಧ್ರಪ್ರದೇಶ(ನ.7): ಭಾರತದ ಭೂ ವೀಕ್ಷಣಾ ಉಪಗ್ರಹ ಇಒಎಸ್​-01 ಹಾಗೂ ವಿದೇಶದ 9 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 49 ರಾಕೆಟ್​ ಇಂದು ಉಡಾವಣೆ ಆಗಲಿದೆ. ಮಧ್ಯಾಹ್ನ 3 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಆಗಲಿದೆ. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 51 ನೇ ಮಿಷನ್​ನಲ್ಲಿ ಇಒಎಸ್ -01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಒಂಭತ್ತು ಅಂತರರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಸಾಗಿಸಲಿದೆ.

EOS-01 ಭೂಮಿಯ ಸುತ್ತ ಸುತ್ತುವ ಉಪಗ್ರಹವಾಗಿದ್ದು ಇದು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಹಾಯಕಾರಿಯಾಗಲಿದೆ. ಇನ್ನು ಅಂತಾರಾಷ್ಟ್ರೀಯ ಸ್ಯಾಟಲೈಟ್​ಗಳನ್ನು ವಾಣಿಜ್ಯ ಒಪ್ಪಂದದ ಮೇರೆ ಉಡಾಯಿಸಲು ಇಸ್ರೋ ಮುಂದಾಗಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್​​ನಲ್ಲಿ ಈ ಸ್ಯಾಟಲೈಟ್​ಗಳನ್ನು ಉಡಾಯಿಸಲು ಮುಂದಾಗಿದ್ದು ಉಡಾವಣೆಯ ದೃಶ್ಯವನ್ನ ಇಸ್ರೋದ ವೆಬ್​ಸೈಟ್, ಯೂಟ್ಯೂಬ್, ಫೇಸ್​ಬುಕ್ ಮತ್ತು ಟ್ವಿಟ್ಟರ್​ ಚಾನೆಲ್​ಗಳಲ್ಲಿ ಜನರು ಲೈವ್​ಗಳಲ್ಲಿ ವೀಕ್ಷಿಸಬಹುದು ಎಂದು ಇಸ್ರೋ ಹೇಳಿದೆ.

- Advertisement -

Related news

error: Content is protected !!