ಬೆಂಗಳೂರು:- ರಾಜ್ಯದಲ್ಲಿ ಇಂದು ಮಹಾಸುನಾಮಿ ,3693 ಮಂದಿ ಕೊರೊನಾ ಸೊಂಕು ಪತ್ತೆ. ಇಂದಿಗೆ ಸೊಂಕಿತರ ಸಂಖ್ಯೆ ರಾಜ್ಯದಲ್ಲಿ 55,115 ಕ್ಕೇರಿದೆ.ಹಾಗೂ ರಾಜ್ಯದಲ್ಲಿ ಬರೋಬ್ಬರಿ 1147 ಮಂದಿ ಸೊಂಕಿಗೆ ಬಲಿಯಾಗಿದ್ದಾರೆ. ಇಂದು ರಾಜ್ಯದಲ್ಲಿ 115 ಮಂದಿ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕೂಡ 2208 ಮಂದಿಯಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 27,496ಕ್ಕೆ ಏರಿಕೆಯಾಗಿದೆ.ಬೆಂಗಳೂರಿನಲ್ಲಿ 75 ಮಂದಿ ಇಂದು ಬಲಿಯಾಗಿದ್ದಾರೆ.
ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಇನ್ನೂರು ರ ಗಡಿದಾಟಿದ ಕೊರೊನಾ ಮಹಾಸುನಾಮಿ. ಜಿಲ್ಲೆಯಲ್ಲಿ ಬರೋಬ್ಬರಿ 311 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. 8 ಮಂದಿ ಜಿಲ್ಲೆಯಲ್ಲಿ ಬಲಿಯಾಗಿದ್ದಾರೆ. ಏಳು ಮಂದಿ ಪುರುಷರು ಹಾಗೂ ಓರ್ವ ಮಹಿಳೆ ಕೊರೋನಾದಿಂದ ಸಾವು ಆಗಿದೆ. 53, 56, 65, 68, 69, 70 ಹಾಗೂ 72 ವರ್ಷದ ಏಳು ಮಂದಿ ಪುರುಷರು ಹಾಗೂ 72 ವರ್ಷದ ಓರ್ವ ಮಹಿಳೆಯ ಕೊರೋನಾದಿಂದ ಬಲಿಯಾಗಿದ್ದಾರೆ.ಒಟ್ಟು ಜಿಲ್ಲೆಯಲ್ಲಿ 71 ಮಂದಿ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ.