Sunday, November 10, 2024
spot_imgspot_img
spot_imgspot_img

ವಿಶ್ವದ ಮೊದಲ ಕೊವಿಡ್​-19 ಲಸಿಕೆ ಸಿದ್ಧ.? ರಷ್ಯಾದಲ್ಲಿ ಕ್ಲಿನಿಕಲ್​ ಪ್ರಯೋಗ ಸಂಪೂರ್ಣ ಯಶಸ್ವಿ.!

- Advertisement -
- Advertisement -

ಮಾಸ್ಕೋ: ಜಗತ್ತಿನ ಹಲವು ರಾಷ್ಟ್ರಗಳು ಮಾರಕ ಕೊವಿಡ್​-19 ಸೋಂಕಿನ ವಿರುದ್ಧ ಹೋರಾಡುವ ಲಸಿಕೆ ಕಂಡುಹಿಡಿಯುತ್ತಿವೆ. ಕ್ಲಿನಕಲ್ ಪ್ರಯೋಗವನ್ನೂ ಹಂತಹಂತವಾಗಿ ನಡೆಸುತ್ತಿವೆ.ಈಗಾಗಲೇ ಕೆಲವು ದೇಶಗಳು ತಾವು ಕರೊನಾಕ್ಕೆ ಲಸಿಕೆ ಕಂಡುಹಿಡಿದಿದ್ದು, ಅದು ಪ್ರಯೋಗದ ಹಂತದಲ್ಲಿದೆ ಎಂದು ಹೇಳಿಕೊಂಡಿವೆ.

ಇದೀಗ ರಷ್ಯಾ ಒಂದು ಹೇಳಿಕೆ ಬಿಡುಗಡೆ ಮಾಡಿದ್ದು, ನಾವು ಲಸಿಕೆ ಸಂಶೋಧನೆ ಮಾಡಿದ್ದೇವೆ. ಅದರ ಕ್ಲಿನಿಕಲ್​ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದೂ ತಿಳಿಸಿದೆ.ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ  ಲಸಿಕೆ ತಯಾರಿಸಿದೆ. ಇನ್ಸ್ಟಿಟ್ಯೂಟ್​ ಫಾರ್​ ಟ್ರಾನ್ಸ್ಲೇಶನ್​ ಮೆಡಿಕಲ್​ ಆ್ಯಂಡ್​ ಬಯೋಟೆಕ್ನಾಲಜಿಯ ನಿರ್ದೇಶಕ ವಾದಿಮ್​ ತಾರಾಸೊವ್​ ಮಾಹಿತಿ ನೀಡಿದ್ದಾರೆ.

ಲಸಿಕೆ ಪ್ರಯೋಗದಲ್ಲಿ ಸೆಚೆನೊವ್​ ಯೂನಿವರ್ಸಿಟಿಯ ಸ್ವಯಂಸೇವಕರನ್ನು ಒಳಗೊಳ್ಳಲಾಗಿತ್ತು. ಅವರ ಮೇಲೆ ನಡೆಸಿದ ಕ್ಲಿನಿಕಲ್​ ಟ್ರಯಲ್​ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಅವರಲ್ಲಿ ಒಂದು ಗುಂಪು ಜು.15ರಂದು ಡಿಸ್​ಚಾರ್ಜ್​ ಆಗಲಿದೆ. ಮತ್ತೊಂದು ಗುಂಪಿನಲ್ಲಿರುವವರನ್ನು ಜುಲೈ 20ರಂದು ಡಿಸ್​ಚಾರ್ಜ್​ ಮಾಡುತ್ತೇವೆ ಎಂದು ವಾದಿಮ್​ ತಿಳಿಸಿದ್ದಾರೆ.

ಮನುಷ್ಯನ ದೇಹಕ್ಕೆ ಈ ಲಸಿಕೆ ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷೆ ಮಾಡಲಾಗಿದೆ. ಲಸಿಕೆಯ ಪ್ರಯೋಗ ಯಶಸ್ವಿಯಾಗಿದೆ. ಲಸಿಕೆಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದು ಸಾಬೀತಾಗಿದೆ ಎಂದು ಯೂನಿವರ್ಸಿಟಿ ತಿಳಿಸಿದೆ. 

- Advertisement -

Related news

error: Content is protected !!