ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ನವದೆಹಲಿ: ಮೊದಲ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಪ್ರಯೋಗ ಸೋಂಕಿತರ ಮೇಲೆ ಆರಂಭಗೊಂಡಿದೆ. ಭಾರತ್ ಬಯೋಟಿಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ರೋಹ್ಟಕ್ ನ ಪೋಸ್ಟ್ ಗ್ರಾಜ್ಯೂಯೆಟ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಆರಂಭಿಸಲಾಗಿದೆ.
ಈ ಬಗ್ಗೆ ಹರ್ಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ. ಎಲ್ಲರೂ ಚಿಕಿತ್ಸೆ ಸ್ಪಂದಿಸುತ್ತಿದ್ದು, ಸೋಂಕಿತರ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಯಾವ ರೀತಿ ನಡೆಯುತ್ತೆ ಪ್ರಯೋಗ..?
ಯಾವುದೇ ಒಂದು ಔಷಧಿಯನ್ನು ಬಿಡುಗಡೆ ಮಾಡುವ ಮುನ್ನ ಅದನ್ನು ಕೆಲವರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಎಷ್ಟು ಪ್ರಮಾಣದ ಔಷಧಿ ಬೇಕು ಎಂಬುದನ್ನು ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಯಾವುದಾದರೂ ಅಡ್ಡ ಪರಿಣಾಮವಿದೆಯಾ ಎಂಬುದರ ಬಗ್ಗೆಯೂ ಟೆಸ್ಟ್ ಮಾಡಲಾಗುತ್ತದೆ. ರೋಗ ನಿರೋಧಕ ಹೆಚ್ಚಿಸುವಲ್ಲಿ ಹಾಗೂ ರೋಗದ ವಿರುದ್ಧ ಹೋರಾಡುವಲ್ಲಿ ಇದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಪಾಸಿಟಿವ್ ರಿಸಲ್ಟ್ ಬಂದ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.
