Monday, May 6, 2024
spot_imgspot_img
spot_imgspot_img

ಸುಳ್ಯ: ಬೈಕ್ ನಲ್ಲಿ ಪುಟ್ಟ ಮಗುವಿನೊಂದಿಗೆ ಉಮ್ಲಿಂಗ್ ಲಾ ಪ್ರವಾಸ, ದಾಖಲೆ ನಿರ್ಮಿಸಿದ ಸುಳ್ಯದ ದಂಪತಿ

- Advertisement -G L Acharya panikkar
- Advertisement -

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಉದ್ಯಮಿಯೊಬ್ಬರು ಪತ್ನಿ ಮತ್ತು ತಮ್ಮ ಮೂರುವರೆ ವರ್ಷದ ಮಗನೊಂದಿಗೆ ಸುಮಾರು 19,024 ಅಡಿ ಎತ್ತರದ ಉಮ್ಲಿಂಗ್ ಲಾ ಪ್ರದೇಶವನ್ನು ಬೈಕ್‌ನಲ್ಲಿ ತಲುಪಿದ್ದು, ಇದೀಗ ಸುಳ್ಯಕ್ಕೆ ವಾಪಸಾಗುತ್ತಿದ್ದಾರೆ.

ಸುಳ್ಯ ತಾಲೂಕಿನ ನಿವಾಸಿ ಮತ್ತು ಇಲ್ಲಿನ ಹಳೆಗೇಟ್‌ ಎಂಬಲ್ಲಿರುವ ಹೋಮ್ ಗ್ಯಾಲರಿ ಮಾಲೀಕರಾದ ತೌಹೀದ್ ರೆಹ್ಮಾನ್ ಹಾಗೂ ಅವರ ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ತಮ್ಮ ಬುಲೆಟ್‌ ಬೈಕ್‌ನಲ್ಲಿ ಉಮ್ಲಿಂಗ್ ಲಾ ತಲುಪಿದ ದಂಪತಿ. ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (17,498) ಗಿಂತ ಎತ್ತರದ ಮತ್ತು ಪ್ರಸ್ತುತ ಆಮ್ಲಜನಕದ ಮಟ್ಟವು ಶೇ.43 ಮಾತ್ರ ಇರುವ, ಹಾಗೂ ಮೈನಸ್ 2 ಡಿಗ್ರಿಗಿಂತಲೂ ಕಡಿಮೆ ಉಷ್ಣಾಂಶ ಇರುವ ಈ ಸ್ಥಳಕ್ಕೆ ತಲುಪಿದವರಲ್ಲಿ ಮೂರುವರೆ ವರ್ಷ ಪ್ರಾಯದ ಜಝೀಲ್ ರೆಹ್ಮಾನ್ ಬೈಕ್‌ನಲ್ಲಿ ತಲುಪಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾನೆ.ಈ ದಾಖಲೆಯು ಇಂಡಿಯಾ ರೆಕಾರ್ಡ್ ಬುಕ್‌ನಲ್ಲಿ ಸೇರ್ಪಡೆಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾದ್ಯಮವೊಂದರ ಜೊತೆಗೆ ಮಾತನಾಡಿದ ರೆಹ್ಮಾನ್ ಅವರು ನನಗೆ ಸಂಚಾರ ಎಂಬುದು ಪ್ರೀತಿಯ ಹವ್ಯಾಸವಾಗಿದೆ. ಉಮ್ಲಿಂಗ್‌ಲಾಕ್ಕೆ ಇದೇ ಮೊದಲು ಪತ್ನಿ ಮತ್ತು ಮಗನೊಂದಿಗೆ ಬೈಕ್‌ನಲ್ಲಿ ಬಂದಿದ್ದೇನೆ. 19 ದಿನಗಳಲ್ಲಿ ಸುಮಾರು 5 ಸಾವಿರ ಕಿ.ಮೀ ಸಂಚರಿಸಿ ನಾವು ಉಮ್ಲಿಂಗ್ ಲಾ ತಲುಪಿದ್ದೇವೆ. ಇಲ್ಲಿ ನಾವು ನಮ್ಮ ರಾಷ್ಟ್ರಧ್ವಜ, ಕನ್ನಡ ಧ್ವಜ ಮತ್ತು ನಮ್ಮ ತುಳುನಾಡಿನ ಬಾವುಟವನ್ನೂ ಇಲ್ಲಿ ಹಾರಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!