Saturday, April 20, 2024
spot_imgspot_img
spot_imgspot_img

ಸೆಕೆಂಡ್ ಹ್ಯಾಂಡ್ ಕಾರಿನ ಆಸೆಗೆ ಈ ದಂಪತಿಗಳು ಮಾಡಿದ್ದೇನು ಗೊತ್ತಾ?

- Advertisement -G L Acharya panikkar
- Advertisement -

ಉತ್ತರ ಪ್ರದೇಶ: ಸೆಕೆಂಡ್ ಹ್ಯಾಂಡ್ ಕಾರಿನ ಆಸೆಗೆ ತಾವೇ ಹೆತ್ತ ಮಗುವನ್ನು ಒಂದೂವರೆ ಲಕ್ಷ ರೂಪಾಯಿಗೆ ದಂಪತಿ ಮಾರಿದ ಶಾಕಿಂಗ್ ಘಟನೆಯೊಂದು ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ನಡೆದಿದೆ.

ಮೊಮ್ಮಗು ಕಾಣೆಯಾಗಿರುವುದರಿಂದ ಸಂದೇಹಗೊ0ಡ ಅಜ್ಜ- ಅಜ್ಜಿ ನಂತರ ಪೊಲೀಸರನ್ನು ಸಂಪರ್ಕಿಸಿ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ.

driving

ತಮ್ಮ ಮಗ, ಸೊಸೆ ಸೇರಿ ಮಗುವನ್ನು ಮಾರಿದ್ದಾರೆ. ಉದ್ಯಮಿಯೊಬ್ಬರಿಗೆ ಒಂದೂವರೆ ಲಕ್ಷ ರೂಪಾಯಿಗೆ ಮಗು ಮಾರಾಟವಾಗಿದೆ. ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳಲು ಈ ಕೆಲಸ ಮಾಡಿದ್ದಾರೆ ಎಂದು ಅಜ್ಜ- ಅಜ್ಜಿ ತಿರ್ವಾ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.

ಇದರ ಬೆನ್ನತ್ತಿ ಹೋದ ಪೊಲೀಸರಿಗೆ ಅಜ್ಜ-ಅಜ್ಜಿ ಹೇಳಿದ ಉದ್ಯಮಿ ಮನೆಯಲ್ಲಿ ಮಗು ಪತ್ತೆಯಾಗಿದೆ. ಅವರನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!