- Advertisement -
- Advertisement -
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಕೋವಿಡ್ -19 ಸಾಂಕ್ರಾಮಿಕ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಬಗ್ಗೆ ಸರಕಾರದ ಸುತೋಲೆಯನ್ವಯ ರಚಿಸಲಾಗಿರುವ ವಾರ್ಡ್ ಮಟ್ಟದ ಕಾರ್ಯಚರಣೆ ಪಡೆ ಸದಸ್ಯರು ಮತ್ತು ಬೂತ್ ಮಟ್ಟದ ಸಮಿತಿಗಳ ಮುಖ್ಯಸ್ಥರುಗಳಿಗೆ ಆನ್ ಲೈನ್ ಮುಖಾಂತರ ತರಬೇತಿಯನ್ನು ನೀಡಲಾಯಿತು.
ತರಬೇತಿಯಲ್ಲಿ ಸರ್ಕಾರಿ ವೈದ್ಯಾಧಿಕಾರಿಯಾದ ಡಾ.ವಿಶ್ವೇಶ್ವರರವರು ಮಾಸ್ಟರ್ ತರಬೇತುದಾರರಾಗಿ ಭಾಗವಹಿಸಿದರು. ತರಬೇತಿಯಲ್ಲಿ ಪಟ್ಟಣ ಪಂಚಾಯಿತಿ ನ ಅಧ್ಯಕ್ಷೆ, ಉಪಾದ್ಯಕ್ಷ ಮತ್ತು ಎಲ್ಲಾ ಸದಸ್ಯರು, ಮುಖ್ಯಾಧಿಕಾರಿ, ಸ್ವಯಂ ಸೇವಕರು ಹಾಜರಿದ್ದರು. ಹಾಗು ವೈದ್ಯಕೀಯ ಸಿಬ್ಬಂದಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.
- Advertisement -