- Advertisement -
- Advertisement -
ಮಂಗಳೂರು: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುವುದಕ್ಕೆ ಕ್ರೈಸ್ತ ಸಮುದಾಯವೂ ತಂಡ ರಚಿಸಿದೆ.ಮಂಗಳೂರು ಬಿಷಪ್ ನೇತೃತ್ವದ ಕೇಂದ್ರ ಸಮಿತಿ ,ಆಯಾ ಚರ್ಚ್ ಧರ್ಮಗುರುಗಳ ಹಾಗೂ ಆರೋಗ್ಯ ಸಿಬ್ಬಂದಿ ಮಾರ್ಗದರ್ಶನದಲ್ಲಿ ಚರ್ಚ್‌ನಲ್ಲೇ ಅಂತ್ಯಸಂಸ್ಕಾರ ನೆರವೇರಿಸುತ್ತದೆ.ಮೃತದೇಹವನ್ನು ಚರ್ಚ್‌ನ ಒಳಗೆ ತಂದು ಪ್ರಾರ್ಥನೆ ನಡೆಸುವುದಿಲ್ಲ. ಚರ್ಚ್ ಆವರಣದಲ್ಲಿರುವ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಮಂಗಳೂರುನಲ್ಲಿ ಕೋವಿಡ್‌ನಿಂದ ಕ್ತೈಸ್ತ ಸಮುದಾಯದ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಡುವ ದ.ಕ ಹಾಗೂ ಕಾಸರಗೋಡು ಜಿಲ್ಲೆಯ ಎಲ್ಲ 140 ಚರ್ಚ್‌ಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಮಂಗಳೂರು ಬಿಷಪ್ ನೇತೃತ್ವದ ಕೇಂದ್ರ ಸಮಿತಿ ಕ್ರೈಸ್ತ ವಿಧಿ ವಿಧಾನದ ಮೂಲಕ, ಆಯಾ ಚರ್ಚ್ ಧರ್ಮಗುರುಗಳ ಹಾಗೂ ಆರೋಗ್ಯ ಸಿಬ್ಬಂದಿ ಮಾರ್ಗದರ್ಶನದಲ್ಲಿ ,ಕೋವಿಡ್ ನಿಯಮದಂತೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಸೂಚನೆ ನೀಡಿದೆ.
- Advertisement -