Thursday, June 25, 2026
spot_imgspot_img
spot_imgspot_img

ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 18 ಕೊರೊನಾ ರೋಗಿಗಳು ಬೆಂಕಿಗಾಹುತಿ!

- Advertisement -
- Advertisement -

ಗುಜರಾತ್​: ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 18 ಕೊರೊನಾ ರೋಗಿಗಳು ಸಾವನ್ನಪ್ಪಿರೋ ದಾರುಣ ಘಟನೆ ಗುಜರಾತ್​ನ ಭರೂಚ್​​ನಲ್ಲಿ ನಡೆದಿದೆ.

ಸ್ಟ್ರೆಚ್ಚರ್ ಹಾಗೂ ಬೆಡ್​​ಗಳ ಮೇಲೆ ರೋಗಿಗಳು ಸಜೀವ ದಹನವಾಗಿರುವ ದೃಶ್ಯ ಮನಕಲಕುವಂತಿವೆ. 4 ಅಂತಸ್ತಿನ ವೆಲ್​​ಫೇರ್ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ. ಕಳೆದ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಹೇಳಲಾಗ್ತಿದೆ. ಸುಮಾರು 50 ರೋಗಿಗಳನ್ನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಕಿ ಅವಘಡದ ಬೆನ್ನಲ್ಲೇ 12 ರೋಗಿಗಳು ಸಾವನ್ನಪ್ಪಿರೋದು ಖಚಿತವಾಗಿತ್ತು. ಇಂದು ಬೆಳಗ್ಗೆ 6.30ರ ವೇಳೆಗೆ ಸಿಕ್ಕಿರೋ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 18ಕ್ಕೇರಿದೆ ಎಂದು ಪೊಲೀಸರು ಹೇಳಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಸಲಾಗ್ತಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!