Tuesday, June 23, 2026
spot_imgspot_img
spot_imgspot_img

ಪುತ್ತೂರು: ಬಿಜೆಪಿ ಯುವ ಮೋರ್ಚಾದಿಂದ ಸುರಕ್ಷತಾ ಕಿಟ್ ವಿತರಣೆ

- Advertisement -
- Advertisement -

ಪುತ್ತೂರು: ಕರ್ತವ್ಯವೇ ದೇವರು ಎಂದು ಕೆಲಸ ಮಾಡುತ್ತಿರುವ ಪೊಲೀಸರಿಗೆ, ಅವ ಸುರಕ್ಷತೆಯನ್ನು ಮನದಲ್ಲಿಟ್ಟುಕೊಂಡು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಅಕ್ಷಯ್ ರೈ ದಂಬೆಕಾನ ಇವರು ಕೊರೊನಾ ಫ್ರಂಟ್‌ಲೈನ್ ವಾರಿಯರ್ಸ್ಗಳಿಗೆ ಕೋವಿಡ್ ಸುರಕ್ಷಾ ಕಿಟ್‌ಗಳನ್ನು ವಿತರಣೆ ಮಾಡಿದರು. ಪುತ್ತೂರು, ಉಪ್ಪಿನಂಗಡಿ, ಬೆಳ್ಳಾರೆಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪಿ.ಪಿ.ಐ ಕಿಟ್, ಸ್ಯಾನಿಟೈಸರ್, ಫೆಸ್ ಮಾಸ್ಕ್, ಎನ್.95 ಮಾಸ್ಕ್, ಆಕ್ಸೋ ಮೀಟರ್ ಕಿಟ್‌ಗಳನ್ನು ವಿತರಣೆ ಮಾಡಿದರು.

ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ಡಿ.ವೈ.ಎಸ್.ಪಿ ಗಾನ ಅವರಿಗೆ ಕಿಟ್ ಹಸ್ತಾಂತರ ಮಾಡಿದರು. ಪುತ್ತೂರು ವೃತ್ತ ನಿರೀಕ್ಷಕ ಗೋಪಾಲ ನಾೈಕ್, ಉಪ್ಪಿನಂಗಡಿ ಠಾಣಾಧಿಕಾರಿ ಕುಮಾರ್, ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಉಪಸ್ಥಿತರಿದ್ದು ಇವರಿಗೂ ಕಿಟ್ ಹಸ್ತಾಂತರಿಸಿದರು.

ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಠಾಣೆಗಳಿಗೂ ಸುರಕ್ಷತೆಯ ಕಿಟ್ ವಿತರಿಸಲಿದ್ದಾರೆ. ಅಂತೆಯೇ ಸರ್ಕಾರಿ ಅಧಿಕಾರಿಗಳಿಗೂ, ಎಲ್ಲಾ ವರ್ಗದ ಅಧಿಕಾರಿಗಳಿಗೆ, ಕೊರೊನಾ ವಾರಿಯರ್ಸ್ಗೆ ಕಿಟ್ ವಿತರಿಸಲಿದ್ದಾರೆ.

ಕಿಟ್ ವಿತರಣೆಯ ವೇಳೆ ಸಂತೋಷ್ ಕುಮಾರ್ ರೈ ಕೈಕಾರ, ಮೋಹನ್ ಕೆ, ಭುವನ್ ಗೌಡ ಕುಂಬ್ರ, ಸಂತೋಷ್ ಕುಮಾರ್ ಪೆರಿಯಡ್ಕ, ನವೀನ್ ರೈ ಕೈಕಾರ, ಜಯಂತ್ ಬರಮೇಲು, ರಾಮ್‌ದಾಸ್ ಶೆಟ್ಟಿ ಜೊತೆಗಿದ್ದರು.

- Advertisement -

Related news

error: Content is protected !!