


ಬೆಂಗಳೂರು: ಕೋವಿಡ್ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೃದಯಾಘಾತ ಕುರಿತು ಸಮೀಕ್ಷೆ ನಡೆಸಿದ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೋವಿಸ್ ಲಸಿಕೆಯಿಂದ ಹೃದಯಾಘಾತ ಎನ್ನುವ ಆರೋಪವನ್ನು ಅಲ್ಲಗಳೆದಿದ್ದಾರೆ.
ಕೋವಿಡ್ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ. ಮಧುಮೇಹ, ಕೊಬ್ಬು ಸೇರಿದಂತೆ ಅನೇಕ ಅಡ್ಡ ಪರಿಣಾಮಗಳು ಹೃದಯಾಘಾತಕ್ಕೆ ಕಾರಣ ಆಗಿವೆ. ರಕ್ತದೊತ್ತಡ, ಶುಗರ್, ದಪ್ಪ ಆಗಿರೋದು, ದೈಹಿಕ ಚಟುವಟಿಕೆ ಇಲ್ಲದೇ ಇರೋದು. ಹೃದಯಾಘಾತ ಹೆಚ್ಚಾಗೋದಕ್ಕೆ ಕಾರಣ ಆಗಿದೆ. ಜನರ ಜೀವನ ಶೈಲಿ ಕೂಡ ಹೃದಯಾಘಾತಕ್ಕೆ ಕಾರಣ ಆಗಿದೆ. ಕೊವಿಡ್ ಲಸಿಕೆಯಿಂದ ನೇರವಾಗಿ ಕಾರಣ ಅಲ್ಲ ಎಂದು ಹೇಳಿದ್ದಾರೆ.
ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಅನುಮಾನ ಇದೆ. ಆದ್ರೆ ನಮ್ಮ ದೇಶದಲ್ಲಿ ಯಾರೂ ಈ ಲಸಿಕೆ ತೆಗೆದುಕೊಂಡಿಲ್ಲ. ನಮ್ಮ ಅಧ್ಯಯನದಲ್ಲಿ ಇದು ಬಯಲಾಗಿಲ್ಲ ವಿಶ್ವಮಟ್ಟದ ಅಧ್ಯಯನದಲ್ಲಿ ಬಯಲಾಗಿದೆ ಎಂದು ಹೇಳಿದ್ದಾರೆ.
ಹೃದಯಾಘಾತ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೆಲವು ತಿಂಗಳ ಹಿಂದೆ ಸಿಎಂ ಅವರು ತನಿಖೆಗೆ ಸೂಚಿಸಿದ್ರು. ತಜ್ಞರ ಸಮಿತಿ ಮಾಡಿ ವರದಿಗೆ ಆದೇಶ ಮಾಡಿದ್ರು. ಕೊವಿಡ್ ಅಥವಾ ಕೊವಿಡ್ ಲಸಿಕೆ ಅಡ್ಡ ಪರಿಣಾಮಗಳು ಏನು? ಸಾವು ಹೇಗೆ ಅಂತಾ ತನಿಖೆ ಮಾಡೋಕೆ ಹೇಳಿದ್ರು. ಮುಖ್ಯ ಕಾರ್ಯದರ್ಶಿ ಸಮಿತಿ ರಚನೆ ಮಾಡಿ ಜಯದೇವ ನಿರ್ದೇಶಕರು ಸೇರಿದಂತೆ ಹಲವು ತಜ್ಞರು ಇದ್ದರು. ಅದರಂತೆ ವಿಶ್ವ ಮಟ್ಟದಲ್ಲಿ ಏನು ತನಿಖೆ ಆಗಿದೆ ಎಂಬುದನ್ನು ವಿಶ್ಲೇಷಣೆ ಮಾಡಲಾಗಿದೆ ಜೊತೆಗೆ ಜಯದೇವ ಆಸ್ಫತ್ರೆಯಲ್ಲೂ ತನಿಖೆ ಮಾಡಿದ್ದಾರೆ. ಈ ವರದಿಯಲ್ಲಿ ಕೊವಿಡ್ ಯಾರಿಗೆ ಆಗಿತ್ತು ಅವರಿಗೆ ಹೃದಯಾಘಾತ ಹೆಚ್ಚಾಗಿ ಆಗಿರೋದು ಅನ್ನೋದು ಕಂಡುಬಂದಿದೆ. ಕೊವಿಡ್ ಬಂದವರಿಗೆ ಹೃದಯಾಘಾತ ಆಗಿರೋದು ವರದಿ ಬಹಿರಂಗ ಆಗಿದೆ ಎಂದು ವಿವರಿಸಿದ್ದಾರೆ.