Saturday, April 20, 2024
spot_imgspot_img
spot_imgspot_img

ಕೊರೊನಾ ವ್ಯಾಕ್ಸಿನೇಷನ್ ಕುರಿತು ಮೋದಿಗೆ ಪತ್ರದ ಮೂಲಕ ಪಂಚ ಸಲಹೆ ನೀಡಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿ ಮೋದಿಗೆ ಪತ್ರ ಬರೆದು 5 ಸಲಹೆಗಳನ್ನು ನೀಡಿದ್ದಾರೆ.

ಮನಮೋಹನ್ ಸಿಂಗ್ ನೀಡಿದ ಸಲಹೆಗಳು ಹೀಗಿವೆ..

1. ಕೇಂದ್ರ ಸರ್ಕಾರ ಕೊರೊನಾ ಲಸಿಕೆಯ ಡೋಸ್​ಗಾಗಿ ಯಾವೆಲ್ಲಾ ವ್ಯಾಕ್ಸಿನ್ ತಯಾರಕರ ಬಳಿ ಆರ್ಡರ್ ಮಾಡಲಾಗಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ಯಾರೆಲ್ಲ ಡೋಸ್ ನೀಡಲು ಒಪ್ಪಿದ್ದಾರೆ ಎಂಬುದನ್ನ ಬಹಿರಂಗಗೊಳಿಸಬೇಕು. ನಾವು ವ್ಯಾಕ್ಸಿನೇಷನ್​ನ ಗುರಿ ತಲುಪಬೇಕಾದಲ್ಲಿ ಮುಂಚಿತವಾಗಿ ವ್ಯಾಕ್ಸಿನ್ ಡೋಸ್​ಗಳಿಗಾಗಿ ಆರ್ಡರ್ ಮಾಡಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನ್ ತಯಾರಕರು ಲಸಿಕೆ ತಲುಪಿಸುತ್ತಾರೆ.

2. ಸರ್ಕಾರ ಹೇಗೆ ವ್ಯಾಕ್ಸಿನ್​ನ್ನು ದೇಶದಾದ್ಯಂತ ತಲುಪಿಸಬೇಕು ಎಂದು ಸೂಚನೆ ನೀಡಬೇಕು. ಸರ್ಕಾರವೇ 10 ಪರ್ಸೆಂಟ್ ವ್ಯಾಕ್ಸಿನ್ ಹಂಚಿಕೆಯನ್ನ ತೆಗೆದುಕೊಂಡು ತುರ್ತು ಇರುವಲ್ಲಿಗೆ ಹಂಚಿಕೆ ಮಾಡುವಂತಾಗಬೇಕು.

3. ರಾಜ್ಯಗಳಿಗೆ ಕೊರೊನಾ ವ್ಯಾಕ್ಸಿನೇಷನ್ ವಿಚಾರದಲ್ಲಿ ಆದ್ಯತಾವಲಯವನ್ನು ಆಯ್ಕೆ ಮಾಡಿಕೊಳ್ಳಲು ಸಡಿಲಿಕೆ ನೀಡಬೇಕು. ಫ್ರಂಟ್ ಲೈನ್ ವರ್ಕರ್​ಗಳು 45 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರೂ ಅವರಿಗೆ ಲಸಿಕೆ ನೀಡಬೇಕು. ಉದಾಹರಣೆಗೆ ರಾಜ್ಯಗಳು ಸ್ಕೂಲ್ ಟೀಚರ್​​ಗಳನ್ನು, ಬಸ್ ಅಥವಾ​ ತ್ರಿಚಕ್ರ ವಾಹನಗಳ ಚಾಲಕರನ್ನು, ಟ್ಯಾಕ್ಸಿ ಡ್ರೈವರ್​ಗಳನ್ನು, ಮುನಿಸಿಪಲ್ ಮತ್ತು ಪಂಚಾಯತ್ ಸಿಬ್ಬಂದಿಯನ್ನು ಅಥವಾ ಕೋರ್ಟ್​ಗೆ ಹಾಜರಾಗುವ ಲಾಯರ್​ಗಳನ್ನು ಫ್ರಂಟ್ ಐನ್ ವರ್ಕರ್​ಗಳೆಂದು ಗುರುತಿಸಿ ಅವರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಲಸಿಕೆ ನೀಡುವಂತಾಗಬೇಕು.

4. ಕಳೆದ ಕೆಲವು ದಶಕಗಳಲ್ಲಿ ಭಾರತ ಬಹುದೊಡ್ಡ ವ್ಯಾಕ್ಸಿನ್ ತಯಾರಕನಾಗಿ ಬೆಳೆದಿದೆ. ಅದರಲ್ಲೂ ಖಾಸಗಿ ವಲಯಗಳಲ್ಲಿ ಈ ಸಾಮರ್ಥ್ಯ ಹೆಚ್ಚಿದೆ. ಇಂಥ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ವ್ಯಾಕ್ಸಿನ್ ತಯಾರಿಕಾ ಕಂಪನಿಗಳಿಗೆ ಅಗತ್ಯ ನೆರವು ನೀಡಿ ಅವರನ್ನು ಪ್ರೋತ್ಸಾಹಿಸಬೇಕು. ಕಡ್ಡಾಯ ಪರವಾನಗಿ ನಿಬಂಧನೆಗಳನ್ನು ಕಾನೂನಿಗೆ ಸೇರಿಸಲು ಇದು ಉತ್ತಮ ಸಮಯ.

ಇದರಿಂದ ಹಲವು ಕಂಪನಿಗಳು ವ್ಯಾಕ್ಸಿನ್ ತಯಾರಿಕೆಯ ಲೈಸೆನ್ಸ್ ಪಡೆಯಲು ಸಹಾಯವಾಗುತ್ತದೆ. ಈ ಹಿಂದೆ ಹೆಚ್​ಐವಿ ಡಿಸೀಸ್ ಸಮಯದಲ್ಲಿ ಮೆಡಿಸಿನ್ ತಯಾರಿಕೆ ವಿಚಾರದಲ್ಲಿ ಹೀಗೆ ಮಾಡಲಾಗಿತ್ತು. ಈಗಾಗಲೇ ಇಸ್ರೇಲ್ ಹೀಗೆ ಕಡ್ಡಾಯ ಪರವಾನಗಿ ನಿಬಂಧನೆಗಳನ್ನು ಕಾನೂನಿಗೆ ಸೇರಿಸಿದೆ.

5. ಪ್ರಾದೇಶಿಕ ಸರಬರಾಜಿಗೆ ಮಿತಿಗಳಿರುವುದರಿಂದ ಯುಎಸ್​ಎಫ್​ಡಿಎಯಿಂದ ಪರವಾನಗಿ ಪಡೆದ ಯಾವುದೇ ವ್ಯಾಕ್ಸಿನ್​ನ್ನು ಭಾರತಕ್ಕೆ ಆಮದು ಮಮಾಡಿಕೊಳ್ಳಬೇಕು.

driving
- Advertisement -

Related news

error: Content is protected !!