Friday, April 19, 2024
spot_imgspot_img
spot_imgspot_img

ಕೊರೋನಾ ಹೆಚ್ಚಿರುವ ಆರು ರಾಜ್ಯಗಳಿಗೆ ವಿಶೇಷ ‘ಕೋವಿಡ್ ರಕ್ಷಣಾ ತಂಡ’

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದೆ, ಆದರೆ ಕೆಲವು ರಾಜ್ಯಗಳಲ್ಲಿ ಮಾತ್ರ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಅಂತಹ ಆರು ರಾಜ್ಯಗಳಿಗೆ ‘ಕೋವಿಡ್ ರಕ್ಷಣಾ ತಂಡ’ಗಳನ್ನು ರವಾನಿಸಿದೆ.

ಸೋಂಕು ಉಲ್ಪಣವಾಗುತ್ತಿರುವ ಕೇರಳ, ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್‌ಗಢ, ಮತ್ತು ಮಣಿಪುರಕ್ಕೆ ಈ ವಿಶೇಷ ‘ಕೋವಿಡ್ ರಕ್ಷಣಾ ತಂಡ’ವನ್ನು ಕೋವಿಡ್-19 ನಿಯಂತ್ರಣ ಮತ್ತು ಧಾರಕ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ಅತೀ ಹೊಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಅಗ್ರ ಮೂರು ಸ್ಥಾನದಲ್ಲಿದ್ದು, ಈ ಪೈಕಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೆ ಕೇರಳದಲ್ಲಿ ಮಾತ್ರ ಸೋಂಕು ಪ್ರಮಾಣ ಏರಿಕೆಯಾಗುತ್ತಿದೆ. ಹೀಗಾಗಿ ಈ ಆರು ರಾಜ್ಯಗಳಿಗೆ ‘ಕೋವಿಡ್ ರಕ್ಷಣಾ ತಂಡ’ಗಳನ್ನು ರವಾನಿಸಲಾಗಿದೆ ಎನ್ನಲಾಗಿದೆ.

- Advertisement -

Related news

error: Content is protected !!