Thursday, April 25, 2024
spot_imgspot_img
spot_imgspot_img

ಗೋವುಗಳನ್ನು ದೇಶದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು; ಅಲಹಾಬಾದ್ ಹೈಕೋರ್ಟ್

- Advertisement -G L Acharya panikkar
- Advertisement -

ಅಲಹಾಬಾದ್: ಗೋವುಗಳು ದೇಶದ ಸಂಸ್ಕೃತಿಯ ಒಂದು ಭಾಗ.. ಗೋವುಗಳನ್ನು ದೇಶದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಜಸ್ಟೀಸ್ ಶೇಖರ್ ಕುಮಾರ್ ಯಾದವ್​ರ ಏಕಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯೊಂದರಲ್ಲಿ ಈ ಕುರಿತು ಹೇಳಿಕೆ ನೀಡಿದ ಜಡ್ಜ್, ಪಾರ್ಲಿಮೆಂಟ್ ಗೋವುಗಳಿಗೆ ಮೂಲಭೂತ ಹಕ್ಕು ನೀಡುವ ಬಿಲ್​ ಒಂದನ್ನು ತರಬೇಕು ಮತ್ತು ಗೋವುಗಳನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು. ಅಲ್ಲದೇ ಗೋವುಗಳಿಗೆ ಹಿಂಸೆ ನೀಡುವ ಕುರಿತು ಮಾತನಾಡುವವರ ವಿರುದ್ಧ ಕಠಿಣ ಕಾನೂನೊಂದನ್ನು ತರಬೇಕು ಎಂದಿದ್ದಾರೆ.

ಗೋವುಗಳ ರಕ್ಷಣೆ ಕೇವಲ ಧಾರ್ಮಿಕ ವ್ಯಾಪ್ತಿಗೆ ಸೀಮಿತವಾದುದಲ್ಲ. ಗೋವುಗಳು ದೇಶದ ಸಂಸ್ಕೃತಿ.. ಈ ಸಂಸ್ಕೃತಿಯನ್ನು ದೇಶದ ಪ್ರತಿಯೊಬ್ಬನೂ ಉಳಿಸಬೇಕು. ಯಾವಾಗ ಗೋವುಗಳ ಕಲ್ಯಾಣವಾಗುತ್ತದೋ ಆಗ ದೇಶದ ಕಲ್ಯಾಣವೂ ಆಗುತ್ತದೆ ಎಂದು ಕೋರ್ಟ್ ಹೇಳಿದೆ.

ಗೋಸಂರಕ್ಷಣಾ ಕಾಯ್ದೆಯಡಿ ಆರೋಪಿ ಜಾವೇದ್ ಎಂಬಾತನ ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದ್ದು.. ಜಾವೇದ್​ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಜಾಮೀನು ನೀಡಿದರೆ ದೊಡ್ಡ ಮಟ್ಟದಲ್ಲಿ ಸಮಾಜದಲ್ಲಿ ಹಿಂಸೆಗೆ ಕಾರಣವಾಗಬಹುದು ಎಂದು ಕೋರ್ಟ್ ಜಾಮೀನಿಗೆ ನಿರಾಕರಿಸಿದೆ.

- Advertisement -

Related news

error: Content is protected !!