Sunday, May 5, 2024
spot_imgspot_img
spot_imgspot_img

ಕ್ರಿಕೆಟ್ ಕಾಶಿಯಲ್ಲಿ ಭಾರತದ ಹುಲಿಗಳ ಅಬ್ಬರ; ಭಾರತಕ್ಕೆ 243 ರನ್‌ಗಳ ಭರ್ಜರಿ ಜಯ

- Advertisement -G L Acharya panikkar
- Advertisement -

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಹೈವೋಲ್ಟೇಜ್ ಕದನ ಏಕಪಕ್ಷೀಯವಾಗಿ ಅಂತ್ಯಗೊಂಡಿದೆ. ಭಾರತದ ಹುಲಿಗಳ ಅಬ್ಬರಕ್ಕೆ ನಡುಗಿದ ಹರಿಣಗಳು ಕೇವಲ 83 ರನ್​ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 243 ರನ್​ಗಳಿಂದ ಸೋಲು ಕಂಡಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಹೈವೋಲ್ಟೇಜ್ ಕದನ ಏಕಪಕ್ಷೀಯವಾಗಿ ಅಂತ್ಯಗೊಂಡಿದೆ. ಭಾರತದ ಹುಲಿಗಳ ಅಬ್ಬರಕ್ಕೆ ನಡುಗಿದ ಹರಿಣಗಳು ಕೇವಲ 83 ರನ್​ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 243 ರನ್​ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅಜೇಯ 101 ಮತ್ತು ಶ್ರೇಯಸ್ ಅಯ್ಯರ್ ಅವರ 77 ರನ್‌ಗಳ ಆಧಾರದ ಮೇಲೆ ಮೊದಲು ಬ್ಯಾಟ್ ಮಾಡಿದ ಭಾರತ ಐದು ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿತು.

ಈ ಇಡೀ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಬಿರುಸಿನ ಆಟ ಪ್ರದರ್ಶಿಸಿದ್ದು, ಈ ಪಂದ್ಯ ರೋಚಕವಾಗಲಿದೆ ಎಂದು ಸಂಪೂರ್ಣವಾಗಿ ನಿರೀಕ್ಷಿಸಲಾಗಿತ್ತು. ಆದರೆ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾಕ್ಕೆ ಆರಂಭದಲ್ಲಿ ಆಘಾತ ನೀಡಿದರು. ಇದಾದ ಬಳಿಕ ರವೀಂದ್ರ ಜಡೇಜಾ ಅವರ ಸ್ಪಿನ್‌ಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಒಬ್ಬೊಬ್ಬರಾಗಿ ಕುಸಿದು ಬಿದ್ದು ಇಡೀ ತಂಡ 27.1 ಓವರ್‌ಗಳಲ್ಲಿ ಕೇವಲ 87 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಲೀಗ್ ಹಂತವನ್ನು ಮೊದಲ ಸ್ಥಾನದಲ್ಲಿಯೇ ಕೊನೆಗೊಳಿಸುವುದು ಖಚಿತವಾಯಿತು.

- Advertisement -

Related news

error: Content is protected !!