ಮ್ಯಾಂಚೆಸ್ಟರ್: ಬೆನ್ ಸ್ಟೋಕ್ಸ್ ನೀಡಿದ ಆಲ್‌ರೌಂಡ್ ಪ್ರದರ್ಶನದ ಬಲದಿಂದ ಮಿಂಚಿದ ಆತಿಥೇಯ ಇಂಗ್ಲೆಂಡ್, ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯ 2ನೇ ಹಣಾಹಣಿಯಲ್ಲಿ 113 ರನ್‌ಗಳ ಭರ್ಜರಿ ಜಯದೊಂದಿಗೆ 1-1ರಲ್ಲಿ ಸರಣಿ ಸಮಬಲ ತಂದುಕೊಂಡಿದೆ.
What a way to win a Test match! ? #ENGvWIpic.twitter.com/tX4zhNKDtz
— ICC (@ICC) July 20, 2020

ಪಂದ್ಯದ 5ನೇ ಹಾಗೂ ಅಂತಿಮ ದಿನವಾದ ಸೋಮವಾರ ಬೆನ್ ಸ್ಟೋಕ್ಸ್ 57 ಎಸೆತಗಳಲ್ಲಿ ಸಿಡಿಸಿದ ಅಜೇಯ 78 ರನ್‌ಗಳ ಬಲದಿಂದ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 129 ರನ್‌ಗಳನ್ನು ಗಳಿಸಿದ್ದ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಗೆಲ್ಲಲು 312 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪಡೆ ಪೆವಿಲಿಯನ್ ಪರೇಡ್ ನಡೆಸಿ 70.1 ಓವರ್‌ಗಳಲ್ಲಿ 198ಕ್ಕೆ ಆಲ್‌ಔಟ್ ಆಯಿತು.ಇಂಗ್ಲೆಂಡ್ 113 ರನ್ ಗಳ ಗೆಲುವು ಸಾಧಿಸಿದೆ. ಬ್ರಾಡ್ ಮೂರು ವಿಕೆಟ್ ಪಡೆದರೆ, ವೋಕ್ಸ್, ಸ್ಟೋಕ್ಸ್ ಮತ್ತು ಬೆಸ್ ಎರಡು ವಿಕೆಟ್ ಪಡೆದು ಮಿಂಚಿದರು. ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ಇಂಗ್ಲೆಂಡ್: ಮೊದಲ ಇನಿಂಗ್ಸ್ 469ಕ್ಕೆ 9 ಮತ್ತು ಎರಡನೇ ಇನಿಂಗ್ಸ್ 129/3 ಡಿ.
ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್ 287 ಮತ್ತು ದ್ವಿತೀಯ ಇನಿಂಗ್ಸ್ 198/10
