Monday, April 29, 2024
spot_imgspot_img
spot_imgspot_img

ವಿಟ್ಲ: ಭಾರತ್ ಸ್ಕೌಟ್ & ಗೈಡ್ ಸಂಸ್ಥೆಯ ವತಿಯಿಂದ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಾತಾಪಿತ ಗುರುದೇವೋಭವ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಭಾರತ್ ಸ್ಕೌಟ್ & ಗೈಡ್ ಸಂಸ್ಥೆಯ ವತಿಯಿಂದ ಮಾತಾಪಿತ ಗುರುದೇವೋಭವ ಎಂಬ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಲ್ಲಿ ನಾವು ನೈತಿಕ ಮೌಲ್ಯ ಮತ್ತು ಸಂಸ್ಕಾರವನ್ನು ಬೆಳೆಸಿಕೊಳ್ಳುವ ಸಲುವಾಗಿ ವಿಠಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಯುತ ರಾಧಾಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಮಕ್ಕಳು ತಮ್ಮ ಹೆತ್ತವರ ಗೆ ಆರತಿ ಬೆಳಗಿ ಪಾದ ಪೂಜೆ ಮಾಡುವುದರೊಂದಿಗೆ ಹೆತ್ತವರ ಹಾಗೂ ಗುರುಗಳ ಆಶೀರ್ವಾದ ಪಡೆದಿರುವುದು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ವಿದ್ಯಾವಂತರ ಆಗೋದರ ಜೊತೆಗೆ ಗುಣವಂತರಾಗಬೇಕು ಜನ್ಮ ಭೂಮಿಯ ಸೇವೆ ಮಾಡುವುದನ್ನು ಮರೆಯಬಾರದೆಂದು ಈ ಸಂದರ್ಭದಲ್ಲಿ ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್. ಎನ್ ಕೂಡೂರು ರವರು ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಾಂಶುಪಾಲ ಜಯರಾಮ್ ರೈ ಅವರು ಸಂಸ್ಕಾರ ಸಂಸ್ಕೃತಿ ಸತ್ ಸಂಪ್ರದಾಯಗಳನ್ನು ಹೊಂದಿದ ದೇಶ ಭಾರತ ಮೊದಲ ಪ್ರಾಶಸ್ತ್ಯ ಮಾತೆಗೆ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ತುಂಬುವ ಮೂಲಕ ಆದರ್ಶ ವ್ಯಕ್ತಿತ್ವ ರೂಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದು ತಿಳಿಸುತ್ತಾ ಎಲ್ಲರನ್ನು ಸ್ವಾಗತಿಸಿದರು.

ಹೆತ್ತವರ ಪರವಾಗಿ ಶ್ರೀಮತಿ ಸವಿತಾ ಹಾಗೂ ಶ್ರೀಮತಿ ಶ್ರೀದೇವಿಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 10ನೇ ತರಗತಿಯ ಸ್ಕೌಟ್ ವಿದ್ಯಾರ್ಥಿಸಾತ್ವಿಕ್&ಗೈಡ್ ವಿದ್ಯಾರ್ಥಿ ಸೃಜನ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀ ಪ್ರಕಾಶ್ ಕುಕ್ಕಿಲ, ಪ್ರಭಾಕರ್ ಶೆಟ್ಟಿ, ಮೋನಪ್ಪ ಶೆಟ್ಟಿ, ಶ್ರೀಧರ್ ಶೆಟ್ಟಿ, ಪ್ರತಿಭಾಶ್ರೀಧರ್ ಶೆಟ್ಟಿ, ಮೋಹನ್, ಆಡಳಿತ ಅಧಿಕಾರಿ ರಾಧಾಕೃಷ್ಣ, ಪ್ರಾಂಶುಪಾಲೆ ಜ್ಯೋತಿ ಹಾಗೂ ಭಾರತ್ ಸ್ಕೌಟ್ & ಗೈಡ್ಸ್ ನ ರಾಜ್ಯ ಸಂಘಟನಾ ಆಯುಕ್ತ ಶ್ರೀಯುತ ಭರತ್ ರಾಜ್ ಇವರು ಸ್ಕೌಟ್ &ಗೈಡ್ ವತಿಯಿಂದ ಆಯೋಜಿಸಿರುವಂತಹ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೈಡ್ಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಜಯಶ್ರೀ ಮತ್ತು ನಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -

Related news

error: Content is protected !!