ಸೌಥಂಪ್ಟನ್: ಕೋವಿಡ್-19 ಲಾಕ್ ಡೌನ್ ನಂತರ ನಡೆದ ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.200 ರನ್ ಗೆಲುವಿನ ಸವಾಲು ಬೆನ್ನಟ್ಟಿದ ವೆಸ್ಟ್ ಇಂಡೀಸ್, ಜೋಫ್ರಾ ಆರ್ಚರ್ , ಮಾರಕ ದಾಳಿ ನಡುವೆಯೂ ಜಮೈರ್ನ್ ಬ್ಲ್ಯಾಕ್ವುಡ್ 95 ರನ್ನ ಭರ್ಜರಿ ಬ್ಯಾಟಿಂಗ್ ಫಲವಾಗಿ 64.2 ಓವರ್ ಗಳಲ್ಲಿ 6 ವಿಕೆಟ್ ಗೆ 200 ರನ್ ಗುರಿ ಮುಟ್ಟಿತು.
ಇದಕ್ಕೂ ಮುನ್ನ 5ನೇ ದಿನದಾಟದಲ್ಲಿ 8 ವಿಕೆಟ್‌ಗೆ 284 ರನ್‌ಗಳಿಂದ 2ನೇ ಇನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿದ್ದ ಇಂಗ್ಲೆಂಡ್, 111.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲ್‌ಔಟ್ ಆಯಿತು. ಇಂಗ್ಲೆಂಡ್ ತಂಡದ ಬಲಿಷ್ಠ ಬೌಲಿಂಗ್ ವಿಭಾಗದ ಎದುರು ಟೆಸ್ಟ್‌ನ 5ನೇ ದಿನದಂದು 200 ರನ್ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಜೇಮ್ಸ್ ಆಂಡರ್ಸನ್, ಜೋಫ್ರ ಆರ್ಚರ್ ಮತ್ತು ಮಾರ್ಕ್ ವುಡ್ ಅವರ ಮಾರಕ ಬೌಲಿಂಗ್ ದಾಳಿ ಎದುರು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜೆರ್ಮೈನ್ ಬ್ಲಾಕ್‌ವುಡ್, 154 ಎಸೆತಗಳಲ್ಲಿ 12 ಫೋರ್‌ಗಳ ನೆರವಿನಿಂದ 95 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.
?Stat Alert?
— Windies Cricket (@windiescricket) July 12, 2020
West Indies is the only away team to chase a target of 200+ twice in England in this century??????#WIReady #ENGvWI #MenInMaroon pic.twitter.com/yCkqfao244
ಸಂಕ್ಷಿಪ್ತ ಸ್ಕೋರ್:-
ಇಂಗ್ಲೆಂಡ್:ಮೊದಲ ಇನಿಂಗ್ಸ್ 204 ಮತ್ತು 2ನೇ ಇನಿಂಗ್ಸ್ 313, ವೆಸ್ಟ್ ಇಂಡೀಸ್:ಮೊದಲ ಇನಿಂಗ್ಸ್ 318 ಮತ್ತು2ನೇ ಇನಿಂಗ್ಸ್ 6 ವಿಕೆಟ್‌ಗೆ 200, (ಆರ್ಚರ್ 45ಕ್ಕೆ 3, ಸ್ಟೋಕ್ಸ್ 34ಕ್ಕೆ 2)