


ಸುರತ್ಕಲ್: ಕಾನ ಬಾರ್ ವೊಂದರ ಬಳಿ ಗುರುವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸಹಿತ ಮೂವರನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಭಜರಂಗದಳ ಕಾರ್ಯಕರ್ತ ಗುರುರಾಜ್, ಆತನ ಸ್ನೇಹಿತರಾದ ಅಲೆಕ್ಸ್ ಸಂತೋಷ್, ನಿತಿನ್ ಎಂಬವರನ್ಮು ವಶಕ್ಕೆ ಪಡೆದಿರುವ ಪೊಲೀಸರು ತಲೆಮರೆಸಿಕೊಂಡಿರುವ ಸುಶಾಂತ್ ಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.ಘಟನೆ ನಡೆದ ಕೂಡಲೇ ತನಿಖೆ ಆರಂಭಿಸಿದ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ಅಲ್ಲದೇ, ಆರೋಪಿಗಳ ಗುರುತುಗಳನ್ನೂ ಪತ್ತೆಮಾಡಿತ್ತು.
ಬೆಳಗ್ಗಿನ ಜಾವ 2.30ರ ಸುಮಾರಿಗೆ ಪೊಲೀಸರ ಒಂದು ತಂಡ ಪ್ರಮುಖ ಆರೋಪಿ ಗುರುರಾಜ್ ನ ಹಡಗು ತಾಣಕ್ಕೆ ದಾಳಿ ಮಾಡಿದ್ದು, ಅದಾಗಲೇ ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನೋರ್ವ ಆರೋಪಿಗಾಗಿ ಶೋಧಕಾರ್ಯಾಚರಣೆ ಮುಂದುವರಿಸಿದ್ದಾರೆ.








