- Advertisement -
- Advertisement -
ಕಡಬ: ಬೆಳ್ತಂಗಡಿ ನಿವಾಸಿಯಾದ ಯುವತಿಯೊಬ್ಬರು ಸೆಲ್ಸ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಏಪ್ರಿಲ್ 8ರಂದು ಮಧ್ಯಾಹ್ನ ತನ್ನ ಇಬ್ಬರು ಸಹೋದ್ಯೋಗಿ ಯುವತಿಯರೊಂದಿಗೆ ಕಡಬ ತಾಲೂಕಿನ ಬಲ್ಯ ದೇರಾಜೆ ಪ್ರದೇಶಕ್ಕೆ ತೆರಳಿದ್ದರು.ಈ ವೇಳೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭ ಸ್ಥಳೀಯ ನಿವಾಸಿಯೊಬ್ಬರು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಲಾಗಿದೆ.

ವಿಷಯ ತಿಳಿದು ವಿಚಾರಿಸಲು ಬಂದ ಸಹೋದ್ಯೋಗಿಗಳ ಎದುರಲ್ಲೇ ಆರೋಪಿ ಯುವತಿಯರು ಮೂವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 43/2026ರಡಿ ಕಲಂ 74, 79, 115(2), 352, 351(2), ಬಿಎನ್‌ಎಸ್-2023 ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
- Advertisement -








