Wednesday, June 24, 2026
spot_imgspot_img
spot_imgspot_img

ತಂಗಿಯ ಪತಿಯನ್ನು ಹತ್ಯೆಗೈದು ರುಂಡ ಹಿಡಿದು ಠಾಣೆ ಮೆಟ್ಟಿಲೇರಿದ ಅಣ್ಣ!

- Advertisement -
- Advertisement -

ಭೂಪಾಲ್: ಓಡಿ ಹೋಗಿ ಮದುವೆಯಾದ ಸಹೋದರಿ ಕುರಿತಾಗಿ ಕೋಪಗೊಂಡ ಅಣ್ಣ ಆಕೆಯ ಪತಿಯ ರುಂಡ ಕತ್ತರಿಸಿ ಠಾಣೆಗೆ ತಂದು ಶರಣಾಗಿರುವ ಘಟನೆ ಮಧ್ಯಪ್ರದೇಶದ ಜಬುಲ್ಪುರದಲ್ಲಿ ನಡೆದಿದೆ.

ಶಿವರಾಮ್ ಶುಕ್ಲಾ ಅಲಿಯಾಸ್ ಧೀರಜ್ ಬಂಧಿತ ಆರೋಪಿಯಾಗಿದ್ದಾನೆ. ಮೃತನನ್ನು ವಿಜೇತ್ ಕಶ್ಯಪ್(32) ಎಂದು ಗುರುತಿಲಾಗಿದೆ. ಸಹೋದರಿ ಪ್ರೀತಿಸಿ ಮದುವೆಯಾಗಿದ್ದಾಳೆ ಎಂದು ಕೊಂಪಗೊಂಡ ಸಹೋದರ ಆಕೆಯ ಪತಿಯನ್ನು ಕೊಲೆ ಮಾಡಿದ್ದಾನೆ.

ವಿಜೇತ್ ಕಶ್ಯಪ್ ಕಳೆದ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಮದುವೆಯಾಗಿ ಮನೆಗೆ ಮರಳಿ ಬಂದಿದ್ದರು. ಈ ವೇಳೆ ಕುಪಿತಗೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಲ್ವಾರಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸತೀಶ್ ಪಟೇಲ್ ತಿಳಿಸಿದ್ದಾರೆ.

ಹೊಲದಲ್ಲಿ ಬಿದ್ದಿದ್ದ ರುಂಡ ವಿಲ್ಲದ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಇದು ಕೊಲೆಯೇ ಅಥವಾ ಆತ್ಮಹತ್ಯೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯವರ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

- Advertisement -

Related news

error: Content is protected !!