- Advertisement -
- Advertisement -

ಸಾಗರ : ಕಡಜಿರಳೆ ಎಂಬ ವಿಷಕಾರಿ ಹುಳಕಡಿದು ಎರಡನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಶೆಡ್ತಿಕೆರೆಯಲ್ಲಿ ನಡೆದಿದೆ.
ಶೆಡ್ತಿಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ನಿಶ್ಚಿತ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ನಿಶ್ಚಿತ್ ಅವರ ತಂದೆ ವೆಂಕಟೇಶ್ ಅವರಿಗೂ ಕಡಜಿರಳೆ ಹುಳ ಕಡಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಗುರುವಾರ ಈ ಘಟನೆ ನಡೆದಿದ್ದು, ನಿಶ್ಚಿತ್ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಭೇಟಿ ನೀಡಿದ್ದಾರೆ.
- Advertisement -








