Monday, July 20, 2026
spot_imgspot_img
spot_imgspot_img

ಶಾಲೆಯೊಂದರ ಮಧ್ಯಾಹ್ನದ ಊಟದಲ್ಲಿ ಹಾವಿನ ಮರಿ ಪತ್ತೆ; ನೂರಾರು ವಿದ್ಯಾರ್ಥಿಗಳು ಅಸ್ವಸ್ಥ- ಕೆಲವರ ಸ್ಥಿತಿ ಗಂಭೀರ

- Advertisement -
- Advertisement -

ಸಹರ್ಸಾ: ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಶಾಲೆಯೊಂದರ ಮಧ್ಯಾಹ್ನದ ಊಟದಲ್ಲಿ ಹಾವಿನ ಮರಿ ಪತ್ತೆಯಾದ ಬಳಿಕ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ನಡೆದಿದೆ.ಸಹರ್ಸಾದ ಮಹಿಷಿ ಬ್ಲಾಕ್‌ನ ಮಿಡಲ್ ಸ್ಕೂಲ್ ಬಲುಹಾ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.

ಪ್ರತಿದಿನದಂತೆ ಎನ್‌ಜಿಒವೊಂದು ಪೂರೈಸಿದ ಮಧ್ಯಾಹ್ನದ ಊಟವನ್ನು ವಿದ್ಯಾರ್ಥಿಗಳಿಗೆ ಬಡಿಸಲಾಗಿತ್ತು. ಮಕ್ಕಳು ಊಟ ಸೇವಿಸುತ್ತಿದ್ದ ವೇಳೆ, ವಿದ್ಯಾರ್ಥಿಯೊಬ್ಬನಿಗೆ ಬಡಿಸಿದ ಆಹಾರದಲ್ಲಿ ಮರಿ ಹಾವು ಕಂಡುಬಂದಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ಹೊಟ್ಟೆನೋವು ಸೇರಿದಂತೆ ಅಸ್ವಸ್ಥತೆಯ ಲಕ್ಷಣಗಳನ್ನು ವ್ಯಕ್ತಪಡಿಸಲು ಆರಂಭಿಸಿದರು.

ಕೆಲವೇ ಸಮಯದಲ್ಲಿ ಡಜನ್ಗಟ್ಟಲೆ ಮಕ್ಕಳು ಅಸ್ವಸ್ಥಗೊಂಡು ನರಳಾಡತೊಡಗಿದರು.ಶಾಲಾ ಆಡಳಿತ ತಕ್ಷಣವೇ ಪೊಲೀಸರು ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಲವು ಮಕ್ಕಳನ್ನು ತಮ್ಮ ವಾಹನಗಳಲ್ಲೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು. ಬಳಿಕ ಆಸ್ಪತ್ರೆಯಿಂದ ಬಂದ ಆಂಬ್ಯುಲೆನ್ಸ್‌ಗಳ ಮೂಲಕ ಉಳಿದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಅಸ್ವಸ್ಥಗೊಂಡ ಹಲವಾರು ವಿದ್ಯಾರ್ಥಿಗಳನ್ನು ನಂತರ ಸದರ್‌ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಮಕ್ಕಳ ಸ್ಥಿತಿ ಗಂಭೀರವಾಗಿದ್ದುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಘಟನೆಯ ಬೆನ್ನಲ್ಲೇ ಜಿಲ್ಲಾಧಿಕಾರಿ (ಡಿಎಮ್) ಮಧ್ಯಾಹ್ನದ ಊಟ ಪೂರೈಸುತ್ತಿದ್ದ ಎನ್‌ಜಿಒ ಕ್ಲಸ್ಟರ್‌ಗೆ ತನಿಖಾ ತಂಡವನ್ನು ಕಳುಹಿಸಿದ್ದಾರೆ. ಆಹಾರದ ಗುಣಮಟ್ಟ ಹಾಗೂ ನಿರ್ಲಕ್ಷ್ಯದ ಕುರಿತು ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!