


ಲಕ್ಕೋ: ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ‘ರೀಲ್’ ಚಿತ್ರೀಕರಿಸುವ ಪ್ರಯತ್ನದಲ್ಲಿ ಮಹಿಳೆಯೋರ್ವಳು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.

ಮೋಹಿನಿ (27) ಮೃತ ಮಹಿಳೆಯಾಗಿದ್ದು,ತನ್ನ ಮನೆಯಲ್ಲಿ ರೀಲ್ ಚಿತ್ರೀಕರಿಸಲು ಪ್ರಯತ್ನಿಸುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಕುಟುಂಬ ಸದಸ್ಯರ ಪ್ರಕಾರ ಮೋಹಿನಿ ನೇಣು ಬಿಗಿದುಕೊಳ್ಳುವ ದೃಶ್ಯವನ್ನು ಪುನರ್ ಸೃಷ್ಟಿಸುತ್ತಿದ್ದಳು. ಸ್ಕೂಲ್ ಮೇಲೆ ನಿಂತುಕೊಂಡು ತನ್ನ ಕುತ್ತಿಗೆಯ ಸುತ್ತ ನೇಣಿನ ಕುಣಿಕೆಯನ್ನು ಹಾಕಿಕೊಂಡಿದ್ದ ಆಕೆ ತನ್ನ ಮೊಬೈಲ್ ಫೋನ್‌ನಲ್ಲಿ ಆ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಳು.
ಸದಸ್ಯರ ಪ್ರಕಾರ, ಮೃತ ಮೋಹಿನಿಯು ನೇಣು ಬಿಗಿದುಕೊಳ್ಳುವ ದೃಶ್ಯವನ್ನು ಮರುಸೃಷ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ತನ್ನ ಕುತ್ತಿಗೆಯ ಸುತ್ತ ಹಗ್ಗ ಬಿಗಿದುಕೊಂಡಿರುವ ಮಹಿಳೆಯು, ಸ್ಕೂಲ್ ಮೇಲೆ ನಿಂತುಕೊಂಡು ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ದುರಂತಕ್ಕೆ ತಿರುಗಿದೆ. ಆಕೆ ಸ್ಕೂಲ್ ಮೇಲಿಂದ ಜಾರಿದಳೊ ಅಥವಾ ನಿಯಂತ್ರಣ ಕಳೆದುಕೊಂಡಳೊ ಎಂಬುದು ಇನ್ನೂ ಅಸ್ಪಷ್ಟವಾಗಿದ್ದರೂ, ಆಕೆಯ ಸುತ್ತ ಹಗ್ಗ ಬಿಗಿದುಕೊಂಡು ಕೆಲವೇ ಕ್ಷಣಗಳಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಯನ್ನು ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.








