Monday, July 20, 2026
spot_imgspot_img
spot_imgspot_img

ಹಣ ನೀಡದ್ದಕ್ಕಾಗಿ ತಾಯಿಯ ಕೊಲೆ: ಅಪ್ರಾಪ್ತ ವಯಸ್ಸಿನ ದತ್ತು ಪುತ್ರಿಯಿಂದ ಅಮಾನವೀಯ ಕೃತ್ಯ – ಆಕೆಯ ಬಾಯ್ ಫ್ರೆಂಡ್ ಸೇರಿ ಮೂವರ ಬಂಧನ

- Advertisement -
- Advertisement -

ರಾಂಚಿ, ಎ.29: ರಾಂಚಿ ಜಿಲ್ಲೆಯಲ್ಲಿ ಹಣ ನೀಡದ್ದಕ್ಕಾಗಿ ತನ್ನ ತಾಯಿಯ ಹತ್ಯೆ ಮಾಡಿದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆಕೆಯ ‘ಬಾಯ್ ಫ್ರೆಂಡ್’ ಸೇರಿದಂತೆ ಇಬ್ಬರನ್ನು ಬಿಹಾರದ ಗಯಾದಿಂದ ಬಂಧಿಸಿದ್ದಾರೆ ಎಂದು ಅಧಿಕಾರಿಯೋರ್ವರು ಬುಧವಾರ ತಿಳಿಸಿದ್ದಾರೆ.ಕೊಲೆ ನಡೆದ ಮೂರು ದಿನಗಳ ಬಳಿಕ, ಎ.27ರಂದು ಘಟನೆ ಬೆಳಕಿಗೆ ಬಂದಿದೆ.

ಕೊಲೆಯಾಗಿರುವ ಮಹಿಳೆಯನ್ನು ದೋರಂಡಾ ಪೊಲೀಸ್‌ ಠಾಣಾ ವ್ಯಾಪ್ತಿಯ ಮನಿತೋಲಾ ನಿವಾಸಿ ನಹೀದಾ ಪರ್ವೀನ್ (50) ಎಂದು ಗುರುತಿಸಲಾಗಿದೆ.ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿ ಮೃತ ಮಹಿಳೆಯ ಭಾವ ಎ.26ರಂದು ಲಿಖಿತ ಪೊಲೀಸ್‌ ದೂರು ಸಲ್ಲಿಸಿದ್ದರು. ಮೃತಳ 17 ವರ್ಷದ ದತ್ತು ಪುತ್ರಿಯ ‘ಬಾಯ್ ಫ್ರೆಂಡ್ ಸೇರಿದಂತೆ ಇಬ್ಬರನ್ನು ಬಂಧಿಸಿ ಬಾಲಕಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ವಿಚಾರಣೆಯ ವೇಳೆ ಅಪರಾಧವನ್ನು ಒಪ್ಪಿಕೊಂಡ ಬಾಲಕಿ ತನ್ನ ಸ್ನೇಹಿತ ಅರ್ಬಾಝ್ ಖಾನ್ (20) ಮತ್ತು ಆತನ ಮೂವರು ಸ್ನೇಹಿತರೊಂದಿಗೆ ಸೇರಿ ತನ್ನ ತಾಯಿಯನ್ನು ಕೊಂದಿದ್ದಾಗಿ ತಿಳಿಸಿದ್ದಾಳೆ.

ತಾಯಿ ಹಣ ನೀಡಲು ನಿರಾಕರಿಸಿದ್ದಕ್ಕೆ ಆಕೆಯ ಹತ್ಯೆ ಮಾಡಿದ್ದಾಳೆ ಎಂದು ನಗರ ಎಸ್‌ಪಿ ಪಾರಸ್ ರಾಣಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾನು ತನ್ನ ಸ್ನೇಹಿತನನ್ನು ಮದುವೆಯಾಗಲು ಬಯಸಿದ್ದೆ ಮತ್ತು ಆತನಿಗಾಗಿ ಬಹಳಷ್ಟು ಹಣ ವೆಚ್ಚ ಮಾಡುತ್ತಿದ್ದೆ. ಇದು ತನ್ನ ತಾಯಿಗೆ ತಿಳಿದಾಗ, ಆಕೆ ಹಣ ನೀಡಲು ನಿರಾಕರಿಸಿದ್ದಳು. ಅದರ ನಂತರ ತಾನು ಸ್ನೇಹಿತನಿಗೆ 5 ಲಕ್ಷ ರೂಪಾಯಿ ನೀಡಿದ್ದೆ ಎಂದೂ ಬಾಲಕಿ ಹೇಳಿದ್ದಾಳೆ ಎಂದು ಅವರು ತಿಳಿಸಿದ್ದಾರೆ.ಎ.24ರಂದು ಬಾಲಕಿ ಅರ್ಬಾಝ್ ಮತ್ತು ಆತನ ಮೂವರು ಸ್ನೇಹಿತರೊಂದಿಗೆ ಸೇರಿ ತಾಯಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಳು.

ಎ.26ರಂದು ಡೋರಂಡಾದಲ್ಲಿರುವ ಖಬರಸ್ತಾನದಲ್ಲಿ ಮಹಿಳೆಯ ಶವವನ್ನು ಹೂಳಲಾಗಿತ್ತು. ಮಂಗಳವಾರ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ಪೊಲೀಸರು ಶವವನ್ನು ಹೊರತೆಗೆದಾಗ ಕುತ್ತಿಗೆಯ ಮೇಲೂ ಗಾಯದ ಗುರುತುಗಳು ಕಂಡುಬಂದಿವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ರಾಣಾ ತಿಳಿಸಿದ್ದಾರೆ.

- Advertisement -

Related news

error: Content is protected !!