Tuesday, July 21, 2026
spot_imgspot_img
spot_imgspot_img

ಡಾ.ವಂದನಾ ದಾಸ್ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

- Advertisement -
- Advertisement -

ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯಆಸ್ಪತ್ರೆಯೊಂದರಲ್ಲಿ ನಡೆದಿದ್ದ ಡಾ. ವಂದನಾ ದಾಸ್ ರ ಭೀಕರ ಹತ್ಯೆ ಪ್ರಕರಣದ ಆರೋಪಿ ಜಿ.ಸಂದೀಪ್ ಗೆ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆರೋಪಿಗೆ ಮರಣ ದಂಡನೆ ವಿಧಿಸಬೇಕು ಎಂದು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪ್ರಾಸಿಕ್ಯೂಷನ್ ಹೇಳಿದೆ.

ಸಂತ್ರಸ್ತೆಯ ಕುಟುಂಬದ ಸದಸ್ಯರೂ ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮೇ 2023ರಲ್ಲಿ ತಾಲೂಕು ಆಸ್ಪತ್ರೆಯೊಂದರಲ್ಲಿ ಡಾ. ವಂದನಾ ದಾಸ್ ಅವರನ್ನು ಸಂದೀಪ್ ಬರ್ಬರವಾಗಿ ಹತ್ಯೆಗೈದಿದ್ದ.ವಿವಿಧ ಅಪರಾಧಗಳಿಗಾಗಿ ಒಟ್ಟು 30 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿರುವ ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಅಪರಾಧಿಯು ಈ ಶಿಕ್ಷೆಯನ್ನು ಪೂರೈಸಿದ ಬಳಿಕ ಜೀವಾವಧಿ ಶಿಕ್ಷೆ ಪ್ರಾರಂಭಗೊಳ್ಳಲಿದೆ ಎಂದು ಹೇಳಿದೆ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರತಾಪ್ ಜಿ. ಪಡಿಕ್ಕಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸಂಬಂಧ ವಿಸ್ತ್ರತ ತೀರ್ಪನ್ನು ನಿರೀಕ್ಷಿಸಲಾಗುತ್ತಿದೆ.ಈ ನಡುವೆ, ಈ ತೀರ್ಪಿನಿಂದ ನಮ್ಮ ಕುಟುಂಬಕ್ಕೆ ಸಮಾಧಾನವಾಗಿದ್ದರೂ, ಈ ತೀರ್ಪು ನಮ್ಮ ಪುತ್ರಿಗೆ ನ್ಯಾಯ ದೊರೆತಿದೆ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದು ಡಾ. ವಂದನಾ ದಾಸ್ ತಂದೆ ಹೇಳಿದ್ದಾರೆ.

ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂತ್ರಸ್ತೆಯ ತಂದೆ, ಸಾರ್ವಜನಿಕ ಅಭಿಯೋಜಕರೊಂದಿಗೆ ಚರ್ಚಿಸಿದ ಬಳಿಕ ಈ ಶಿಕ್ಷೆಯನ್ನು ಮತ್ತಷ್ಟು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ, ಮೇಲ್ಮನವಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!