Monday, July 20, 2026
spot_imgspot_img
spot_imgspot_img

ಕುರಿಯ: ವಿದ್ಯುತ್‌ ತಂತಿ ತುಂಡಾಗಿ ಬಿದ್ದು ಅಡಿಕೆ ತೋಟಕ್ಕೆ ಬೆಂಕಿ- 900 ಅಡಿಕೆ ಗಿಡಗಳು ನಾಶ

- Advertisement -
- Advertisement -

ಪುತ್ತೂರು: ಕುರಿಯ ಗ್ರಾಮದ ಬೂಡಿಯಾರ್ ಗಣೇಶ್ ರೈ ಅವರ ಅಡಿಕೆ ತೋಟಕ್ಕೆ ಇಂದು(ಜ.6) ಮಧ್ಯಾಹ್ನ ವಿದ್ಯುತ್ ಲೈನ್ ತುಂಡಾಗಿ ಬಿದ್ದು, ಸುಮಾರು 900 ಅಡಿಕೆ ಗಿಡಗಳು ನಾಶವಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಪಕ್ಕದ ತೋಟಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿದೆ.

- Advertisement -

Related news

error: Content is protected !!