Saturday, June 13, 2026
spot_imgspot_img
spot_imgspot_img

ಮನಬಂದಂತೆ ಸೇನಾ ಸಿಬ್ಬಂದಿಯನ್ನು ಥಳಿಸಿ, ಬೆನ್ನಿನಲ್ಲಿ ಪಿಎಫ್‍ಐ ಎಂದು ಬರೆದ ದುಷ್ಕರ್ಮಿಗಳು

- Advertisement -
- Advertisement -

ಸೇನಾ ಸಿಬ್ಬಂದಿಯೊಬ್ಬರ ಕೈಗಳನ್ನು ಹಿಂದಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿ ಬಳಿಕ ಬೆನ್ನಿನಲ್ಲಿ ಪಿಎಫ್‍ಐ ಎಂದು ಕಿಡಿಗೇಡಿಗಳು ಬರೆದ ಘಟನೆ ಕೇರಳದಲ್ಲಿ ನಡೆದಿದೆ.

ಈ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಸೇನಾ ಸಿಬ್ಬಂದಿಯು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಹಲ್ಲೆಗೊಳಗಾದ ಸೇನಾ ಸಿಬ್ಬಂದಿಯನ್ನು ಶೈನ್ ಕುಮಾರ್ ಎಂದು ಗುರುತಿಸಲಾಗಿದೆ.

ಇವರ ನಿವಾಸ ಕಡಕ್ಕಲ್ ಹತ್ತಿರದ ರಬ್ಬರ್ ತೋಟದಲ್ಲಿ 6 ಜನರಿದ್ದ ಗುಂಪು ಭಾನುವಾರ ರಾತ್ರಿ ಈ ಕೃತ್ಯ ಎಸಗಿದೆ. ಟೇಪ್‍ನಿಂದ ತನ್ನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಥಳಿಸಿ ಬಳಿಕ ಬೆನ್ನಲ್ಲಿ ಹಸಿರು ಬಣ್ಣ ಪೈಂಟ್‍ನಲ್ಲಿ ಪಿಎಫ್‍ಐ ಎಂದು ಬರೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!