Friday, April 26, 2024
spot_imgspot_img
spot_imgspot_img

ಕಸ್ಟಮರ್​ ಕೇರ್​ ​ಹೆಸರಿನಲ್ಲಿ ಮಹಿಳೆಗೆ 52,260 ರೂ. ವಂಚನೆ!

- Advertisement -G L Acharya panikkar
- Advertisement -

ಮುಂಬೈ: ಮಹಿಳೆಯೊಬ್ಬರು ಆನ್​ಲೈನ್​ ಪೇಮೆಂಟ್​ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಸ್ಟಮರ್​​ ಕೇರ್​ ಮೊರೆ ಹೋಗಿ ಬರೋಬ್ಬರಿ 52,260 ರೂಪಾಯಿ ಕಳೆದುಕೊಂಡಿದ್ದಾರೆ.

ಮುಂಬೈನ ಟಾರ್ಡಿಯೋ ನಗರದ ಮಹಿಳೆ ಕ್ಯಾಬ್​ ಬುಕ್​ ಮಾಡುವಾಗ ಆನ್​ಲೈನ್​ ಪೇಮೆಂಟ್​ನ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಅವರು ಜಸ್ಟ್​ ಡಯಲ್​ನಲ್ಲಿ ಕಸ್ಟಮರ್​ ಕೇರ್​ ನಂಬರ್​ ಪಡೆದು ಕರೆ ಮಾಡಿದ್ದಾರೆ.

ಈ ವೇಳೆ ಕರೆ ಸ್ವೀಕರಿಸಿದ ಸೈಬರ್​ ವಂಚಕರು ಕ್ವಿಕ್​ ಸಪೋರ್ಟ್​ ಆ್ಯಪ್​ ಡೌನಲೋಡ್​ ಮಾಡಿಕೊಳ್ಳಲು ಹೇಳಿದ್ದಾರೆ. ಬಳಿಕ ಬ್ಯಾಂಕ್​ ಡೀಟೈಲ್ಸ್ ನಮೂದಿಸುವಂತೆ ತಿಳಿಸಿದ್ದಾರೆ. ವಂಚಕರ ಮಾತು ನಂಬಿದ ಮಹಿಳೆ ಎಲ್ಲಾ ವಿವರಗಳನ್ನು ನೀಡಿದ್ದಾರೆ. ತಕ್ಷಣ ಮಹಿಳೆಯ ಅಕೌಂಟ್​ನಲ್ಲಿದ್ದ ₹ 52,260 ಕಟ್​ ಆಗಿದೆ.

ತಾನು ಸೈಬರ್​ ವಂಚಕರಿಂದ ಮೋಸ ಹೋಗಿರುವುದು ಅರಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ದೂರು​​ ದಾಖಲಾಗಿದೆ

- Advertisement -

Related news

error: Content is protected !!