Thursday, April 25, 2024
spot_imgspot_img
spot_imgspot_img

ದೇವಸ್ಥಾನದ ಭೂ ಕಬಳಿಕೆ; ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ಕುಮಾರ್ ಗೆ ಬಂಧನ ವಾರಂಟ್!

- Advertisement -G L Acharya panikkar
- Advertisement -

ಕೆ ಆರ್ ಪುರ: ಕೊರೊನಾ ಸಂದರ್ಭದಲ್ಲಿ ಸರ್ಕಾರದ ಅನುಮತಿಯಿಲ್ಲದೇ ಕೆ.ಆರ್.ಪುರ ತಹಶೀಲ್ದಾರ್ ಕಚೇರಿಯ ನವೀಕರಣಕ್ಕೆ ದುಂದು ವೆಚ್ಚ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಎರಡು ತಿಂಗಳ ಹಿಂದೆ ಪೂರ್ವ ತಾಲ್ಲೂಕು ತಹಶೀಲ್ದಾರ್ ತೇಜಸ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅವರ ಜಾಗಕ್ಕೆ ಬಂದ ಪುತ್ತೂರು ಮೂಲದ ಎಸ್. ಅಜಿತ್ ಕುಮಾರ್ ಅವರು ಚೆನ್ನಾಗಿಯೇ ಇದ್ದು ತಮ್ಮ ಕಚೇರಿಯನ್ನು ಆಧುನೀಕರಣಗೊಳಿಸಿದ್ದಾರೆ. ಕಬೋರ್ಡ್, ರೆಸ್ಟ್ ರೂಮ್, ಶೌಚಾಲಯ , ಮೀಟಿಂಗ್ ಹಾಲ್, ಡೈನಿಂಗ್ ಟೇಬಲ್, ಸೋಫಾ ಅಳವಡಿಸಿದ್ದಾರೆ.


ಸಾವಿರಾರು ಜನರು ಬರುವ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಒಂದೇ ಒಂದು ಶೌಚಾಲಯವಿಲ್ಲ.ಆದರೆ, ತಹಶೀಲ್ದಾರ್ ಈ ಬಗ್ಗೆ ಗಮನಕೊಡದೆ ತಮ್ಮ ಕೊಠಡಿಯಲ್ಲಿ ಮಾತ್ರ ಎಲ್ಲವನ್ನೂ ಹೈಟೆಕ್ ಆಗಿ ನಿರ್ಮಿಸಿಕೊಂಡಿದ್ದಾರೆಂದು ಎಂದು ಸಾರ್ವಜನಿಕರು ದೂರಿದ್ದಾರೆ.


ತಹಶೀಲ್ದಾರ್ ಕಚೇರಿಯನ್ನು ಕಾರ್ಪೋರೆಟ್ ಕಚೇರಿ ಮಾದರಿಯಲ್ಲಿ ಮರು ವಿನ್ಯಾಸ ಮಾಡಿ ಸುದ್ದಿಯಾಗಿರುವ ಕೆ.ಆರ್.ಪುರ ತಹಶೀಲ್ದಾರ್ ಎಸ್. ಅಜಿತ್ ಕುಮಾರ್ ಅವರು ಸರ್ಕಾರ ನೀಡಿರುವ ವಾಹನಗಳನ್ನು ಬಳಸದೆ ಸರ್ಕಾರಿ ಕೆಲಸಕ್ಕೂ ಐಷಾರಾಮಿ ವಾಹನಗಳಲ್ಲಿ ಓಡಾಡುತ್ತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. .
ತಮ್ಮ ಸ್ವಂತದ ಮಹೀಂದ್ರಾ ಥಾರ್ ಜೀಪು, ಫಾರ್ಚೂನರ್ ಕಾರು ಬಳಸುತ್ತಿದ್ದಾರೆ. ಹೀಗಾಗಿ, ಸರ್ಕಾರದ ಟಾಟಾ ಸುಮೊ ವಾಹನ ಶೆಡ್ ನಿಂದ ಹೊರಕ್ಕೆ ತೆಗೆದಿಲ್ಲ. ಕಾರಣ ಅದು ಅಲ್ಲೇ ತುಕ್ಕು ಹಿಡಿಯುತ್ತಿದೆ.


ಇವರು ಈ ರೀತಿ ಐಷಾರಾಮಿ ಕಾರುಗಳಲ್ಲಿ ಓಡಾಡುವುದನ್ನು ನೋಡಿದರೆ ಸರ್ಕಾರಿ ಅಧಿಕಾರಿಯೋ,ಖಾಸಗಿ ಕಂಪನಿ ಅಧಿಕಾರಿಯೋ ಎಂಬ ಅನುಮಾನ ಮೂಡುತ್ತಿದೆ. ಸರ್ಕಾರಿ ವಾಹನಗಳು ಕೆಟ್ಟಿದ್ದರೆ ಸರ್ಕಾರದ ಹಣದಲ್ಲೇ ದುರಸ್ತಿ ಮಾಡಿಸಿಕೊಳ್ಳಬಹುದಲ್ಲವೇ’ ಎಂದು ಪಟ್ಟಂದೂರು ಅಗ್ರಹಾರದ ಮಂಜುನಾಥ್ ಪ್ರಶ್ನಿಸಿದರು.


20 ವರ್ಷಕ್ಕಿಂತ ಹಳೆಯದಾದ ಸರ್ಕಾರದ ವಾಹನ ಸುಮಾರು 5 ಲಕ್ಷ ಕಿ.ಮೀ ಕ್ರಮಿಸಿದೆ. ಬಳಕೆಗೆ ಯೋಗ್ಯವಾಗದ ಕಾರಣ ಪರಿಶೀಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಲಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಅಜಿತ್ ಕುಮಾರ್ ಸ್ಪಷ್ಟಪಡಿಸಿದರು.

ಇದೀಗ ದೇವಸ್ಥಾನದ ಜಾಗ ಕಬಳಿಕೆ ಸಂಬಂಧ ವರದಿ ಸಲ್ಲಿಸದ ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಅಜಿತ್ ಕುಮಾರ್‌ ಅವರಿಗೆ 25,000 ಸಾವಿರ ದಂಡ ವಿಧಿಸಿರುವ ಕರ್ನಾಟಕ ಭೂ ಕಬಳಿಕ ನಿಷೇಧ ವಿಶೇಷ ನ್ಯಾಯಾಲಯವು ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದೆ.

ಬಿದರಹಳ್ಳಿ ಹೋಬಳಿಯ ಬೆಳತ್ತೂರು ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯದ ಸರ್ವೇ 57 ರಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 2 ಎಕರೆ 26 ಗುಂಟೆ ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿ ನಲವತ್ತಕ್ಕೂ ಹೆಚ್ಚು ಐಷಾರಾಮಿ ಬಂಗಲೆ, ‌ವಿಲ್ಲಾ, ಜಿಮ್, ಕ್ಲಬ್, ಈಜುಕೊಳ ಇತರೆ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಈ ವೇಳೆ ಬಾಳಪ್ಪ ಹಂದಿಗುಂದ ತಹಶೀಲ್ಡಾರ್‌ ಆಗಿದ್ದರು.

ಈ ಸಂಬಂಧ ಜಿಲ್ಲಾಧಿಕಾರಿಗಳ ಮುಖಾಂತರ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ವರದಿ ನೀಡುವಂತೆ ನ್ಯಾಯಾಲಯದ ನಿರ್ದೇಶನ ನೀಡಿದ್ದರೂ ತಹಶೀಲ್ದಾರ್ ಅಜಿತ್ ಕುಮಾರ್ ವರದಿ ಸಲ್ಲಿಸಿಲ್ಲ. ಈ ಕಾರಣಕ್ಕೆ ಏಪ್ರಿಲ್ 27 ರಂದು ಬೆಳಿಗ್ಗೆ 11 ಗಂಟೆಗೆ ಖುದ್ದು ಹಾಜರಾಗುವಂತೆ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿ ಕೆ.ಆರ್.ಪುರ ಠಾಣಾಧಿಕಾರಿಗೆ ರವಾನಿಸಿದೆ.

driving

‘ಈ ಹಿಂದೆ ದೇವಸ್ಥಾನ ಜಾಗ ಜಾತ್ರೆ ಸಮಯದಲ್ಲಿ ಪಲ್ಲಕಿ ನಿಲ್ಲಿಸಲು, ಸರ್ಕಾರಿ ಕಾರ್ಯಕ್ರಮ ಮಾಡಲು ಬಳಕೆ ಆಗುತ್ತಿತ್ತು. ನಾರಾಯಣಸ್ವಾಮಿ, ಲೋಕೇಶ್, ರಂಜಿತ್ ರೆಡ್ಡಿ ಸೇರಿದಂತೆ 63 ಕಬಳಿಕೆ ಮಾಡಿದವರ ಮೇಲೆ ದೂರು ನೀಡಲಾಗಿತ್ತು. ಅಜಿತ್ ಕುಮಾರ್ ಅವರಿಗೆ ನ್ಯಾಯಾಲಯವು ಮೂರು ಸಾರಿ ನೋಟಿಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಒತ್ತುವರಿದಾರರ ಜೊತೆ ತಹಶೀಲ್ದಾರ್ ಶಾಮಿಲಾಗಿದ್ದಾರೆ’ ಎಂದು ದೂರುದಾರ ಬೆಳತ್ತೂರು ಪರಮೇಶ್ ಆರೋಪಿಸಿದರು.

- Advertisement -

Related news

error: Content is protected !!