Monday, April 29, 2024
spot_imgspot_img
spot_imgspot_img

ಬಂಟ್ವಾಳ : ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ದ.ಕ.ಜಿಲ್ಲಾ ಪೊಲೀಸರು.

- Advertisement -G L Acharya panikkar
- Advertisement -

ಬಂಟ್ವಾಳ : ದ.ಕ.ಜಿಲ್ಲೆಯ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿನ ಮರಿಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ದಿನಾಂಕ; 11-01-2024 ರಂದು ಮುಂಜಾನೆ ದರೋಡೆಕೋರರ ತಂಡವೊಂದು ಮಾರಾಕಾಸ್ತ್ರಗಳೊಂದಿಗೆ ನುಗ್ಗಿ ಮನೆಯವರನ್ನು ಬೆದರಿಸಿ ಸುಮಾರು ರೂ.3,15,000 ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:03/2024 ಕಲಂ: 395, 397, 411 ಭಾ.ದಂ.ಸಂ. ರಂತೆ ಪ್ರಕರಣ ದಾಖಲಾಗಿತ್ತು.

ಯಾವುದೇ ಸಣ್ಣ ಸುಳಿವುಗಳೇ ಇಲ್ಲದ ಈ ದರೋಡೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಗೆ ಒಂದು ಸವಾಲು ಆಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡು ರಿಷ್ಯಂತ್, ಐಪಿಎಸ್. ಪೊಲೀಸ್ ಅಧೀಕ್ಷಕರು, ದ.ಕ.ಜಿಲ್ಲೆ ಧರ್ಮಪ್ಪ ಮತ್ತು ಶ್ರೀ ರಾಜೇಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳ ಸಹಭಾಗಿತ್ವದಲ್ಲಿ, ಎಸ್. ವಿಜಯಪ್ರಸಾದ್, ಡಿ.ವೈ.ಎಸ್.ಪಿ. ಬಂಟ್ವಾಳ ರವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಿವಕುಮಾರ ಬಿ. ನಂದಕುಮಾರ್, ಪಿ.ಎಸ್.ಐ. ಪುಂಜಾಲಕಟ್ಟೆ, ಹರೀಶ ಎಂ.ಆರ್. ಪಿ.ಎಸ್. ಐ. ಬಂಟ್ವಾಳ ಗ್ರಾಮಾಂತರ ಠಾಣೆರವರು 3 ವಿಶೇಷ ಪತ್ತೆ ತಂಡಗಳನ್ನು ರಚಿಸಿ ಸದ್ರಿ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ, ನುರಿತ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎ.ಎಸ್.ಐ. ಗಿರೀಶ್, ಹೆಚ್.ಸಿ. ಗಳಾದ ಸುಜು, ರಾಧಾಕೃಷ್ಣ, ಉದಯ ರೈ, ಅದ್ರಾಮ, ಪ್ರವೀಣ್ ರೈ ಪ್ರವೀಣ್, ಸಂದೀಪ್, ರಾಹುಲ್, ಇರ್ಷಾದ್, ರಾಜೇಶ್, ಹರಿಶ್ಚಂದ್ರ, ಪಿ.ಸಿ.ಗಳಾದ ಪುನೀತ್, ರಮ್ಯಾನ್, ಯೊಗೇಶ್ ಡಿ.ಎಲ್. ಕುಮಾರ್ ಹೆಚ್. ಕೆ., ವಿನಾಯಕ ಬಾರ್ಕಿ, ಜಗದೀಶ ಅತ್ತಾಜೆ, ಜಮೀರ್ ಕಲಾರಿ, ಎ.ಹೆಚ್.ಸಿ.ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ಪೊಲೀಸ್ ಕಚೇರಿಯ ಗಣಕಯಂತ್ರ ವಿಭಾಗದ ದಿವಾಕರ್, ಸಂಪತ್ ರವರನ್ನು ನೇಮಕ ಮಾಡಿದ್ದರು.

ಇಲಾಖಾ ಮೇಲಾಧಿಕಾರಿಗಳ ಅತ್ಯಂತ ಅನುಭವಿ ಹಾಗು ಸಮಯೋಚಿತ ಮಾರ್ಗದರ್ಶನ, ಸಲಹೆ ಸೂಚನೆ ಮತ್ತು ನಿರಂತರ ನಿಗಾವಣೆಯಲ್ಲಿ ಸದ್ರಿ ವಿಶೇಷ ಪತ್ತೆ ತಂಡವು ತನ್ನ ನಿರಂತರ ಹಾಗು ಶ್ರಮಭರಿತ ಪ್ರಯತ್ನದಿಂದ ಸದ್ರಿ ದರೋಡೆ ಪ್ರಕರಣವನ್ನು ಭೇಧಿಸಿ ದರೋಡೆಕೋರರನ್ನು ಬಂಧಿಸಿ ದರೋಡೆಗೊಳಗಾದ ರೂ.3,15,000 ಮೌಲ್ಯದ ಚಿನ್ನಾಭರಣ ಹಾಗು ದರೋಡೆಗೆ ಬಳಸಿದ ಒಂದು ಇನ್ನೋವಾ ಕಾರು ಅಂದಾಜು ಮೌಲ್ಯ ರೂ.8 ಲಕ್ಷ ಹಾಗು ಟಾಟಾ ಇಂಡಿಕಾ ಕಾರು ಅಂದಾಜು ಮೌಲ್ಯ ರೂ.2 ಲಕ್ಷ ಇವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.

ಆರೋಪಿಗಳನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ , ದಿನೇಶ್ ನಾಯ್ಕ (22) , ಸಾಗರ ಶೆಟ್ಟಿ (21), , ಮಂಗಳೂರು ತಾಲೂಕು, ಐಕಳ ಗ್ರಾಮದ, ರಾಕೇಶ್ ಎಲ್. ಪಿಂಟೋ (29), , ಕಡಬ ತಾಲೂಕು, ಬೆಳಂದೂರು ಗ್ರಾಮದ, ಎಂ.ಸೀತಾರಾಮ @ ಪ್ರವೀಣ್ (36) ಸುಧೀರ್ (29) ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದಾತ ಮೂಲತ: ಬಂಟ್ವಾಳ ತಾಲೂಕಿನ, ಇರಾ ಗ್ರಾಮದ ಪ್ರಸ್ತುತ ಗೌರಿ ಕಾಲುವೆ, ಚಿಕ್ಕಮಗಳೂರು ಜಿಲ್ಲೆ ನಿವಾಸಿ ಮಹಮ್ಮದ್ ಹನೀಫ್ (49) ಗುರುತಿಸಲಾಗಿದೆ.

ಸದ್ರಿ ಆರೋಪಿಗಳ ಪೈಕಿ ಗಣೇಶ ನಾಯ್ಕ ನು 2023ನೇ ಸಾಲಿನಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮುಲ್ಕಿ ಐಕಳ ಹರೀಶ್ ಶೆಟ್ಟಿರವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಮುಖ್ಯ ಆರೋಪಿಯಾಗಿದ್ದು, ಉಳಿದಂತೆ ಸೀತಾರಾಮ @ ಪ್ರವೀಣ್, ಸುಧೀರ್ ಹಾಗು ಮಹಮ್ಮದ್ ಹನೀಫ್ ರವರ ವಿರುದ್ಧ ದ.ಕ.ಜಿಲ್ಲೆ ಹಾಗು ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಈ ಪತ್ತೆ ಕಾರ್ಯಕ್ಕೆ ಇಲಾಖಾ ಮೇಲಾಧಿಕಾರಿಗಳು ಮೆಚ್ಚುಗೆಯನ್ನು ಸೂಚಿಸಿ ಬಹುಮಾನವನ್ನು ಘೋಷಿಸಿ್ದಾರೆ ಹಾಗು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

- Advertisement -

Related news

error: Content is protected !!