Wednesday, July 22, 2026
spot_imgspot_img
spot_imgspot_img

ವಜ್ರದ ಹರಳು ಎಂದು ನಂಬಿಸಿ ಕೋಟ್ಯಾಂತರ ರೂಪಾಯಿಗೆ ಕಲ್ಲು ಮಾರಟ ಯತ್ನ: ಐವರು ಆರೋಪಿಗಳ ಬಂಧನ!

- Advertisement -
- Advertisement -

ಚಿಕ್ಕಬಳ್ಳಾಪುರ: ವಜ್ರದ ಹರಳು ಎಂದು ನಂಬಿಸಿ ಕಲ್ಲನ್ನು ಕೋಟ್ಯಾಂತರ ರೂಪಾಯಿ ಬೆಲೆಗೆ ಮಾರಾಟ ಯತ್ನಿಸಿದ ವಂಚಕರನ್ನ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಸಾಮಸೇನಹಳ್ಳಿ ಗ್ರಾಮದ ಮಂಜುನಾಥ್, ಶಿವ, ಬೈಯಣ್ಣ, ಹೊನ್ನಪ್ಪ ಸೇರಿ 5 ಮಂದಿಯನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಹೊನ್ನಪ್ಪ ಎಂಬಾತ ಜಮೀನು ಖರೀದಿಗೆ ತನ್ನ ಬಳಿ ಬಂದ ಪ್ರಶಾಂತ್ ಎಂಬಾತನಿಗೆ ಸ್ನೇಹಿತನ ಜಮೀನಲ್ಲಿ ವಜ್ರದ ಹರಳು ಸಿಕ್ಕಿದೆ ಮಾರಾಟ ಮಾಡ್ತೀವಿ ಬನ್ನಿ ನೋಡೋಣ ಎಂದು ಕರೆದುಕೊಂಡು ಹೋಗಿದ್ದಾನೆ.

ಚಿಕ್ಕಬಳ್ಳಾಪುರ ತಾಲೂಕು ದೊಡ್ಡಪೈಯ್ಯಲಗುರ್ಕಿ ಗ್ರಾಮದ ಬಳಿ ಸುಮಾರು ಎಂಟು ಕೆಜಿ ತೂಕದ ಕಲ್ಲನ್ನ ವಜ್ರದ ಹರಳು ಎಂದು ಹೇಳಿ ಸುಮಾರು ಮೂರು ಕೋಟಿಗೆ ಮಾರಲು ಯತ್ನಿಸಿದ್ದಾರೆ. ನಮಗೆ ಈ ವಜ್ರದ ಹರಳು ಭೂಮಿಯಲ್ಲಿ ಸಿಕ್ಕಿದೆ ಫಳ ಫಳ ಹೊಳೆಯುತ್ತೆ, 10 ಕೋಟಿ ರೂಪಾಯಿ ಎಂದು ಹೇಳಿ ಕೊನೆಗೆ 3 ಕೋಟಿ ರೂಪಾಯಿಗೆ ಕೋಡೋದಾಗಿ ಹೇಳಿದ್ದಾರೆ.

ಮಾಹಿತಿ ತಿಳಿದ ಗುಡಿಬಂಡೆ ಪೊಲೀಸ್ ಠಾಣೆಯ ಸಿಪಿಐ ಲಿಂಗರಾಜ್ ಮತ್ತವರ ತಂಡ 5 ಮಂದಿ ಹಾಗೂ ನಕಲಿ ವಜ್ರದ ಹರಳಿನ ಕಲ್ಲು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ವಶದಲ್ಲಿ ಆರೋಪಿಗಳಿದ್ದು, ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!