Monday, August 3, 2026
spot_imgspot_img
spot_imgspot_img

ಮೇಕೆ ಕದ್ದ ಪ್ರಕರಣ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

- Advertisement -
- Advertisement -

ರಾಜಸ್ಥಾನ: ದಲಿತ ಯುವಕನ ಮೇಕೆ ಕದ್ದನೆಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಭಿಲ್ವಾರ ಜಲ್ಲೆಯ ಮಂಡಲಗಢ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಆರೋಪದಡಿಯಲ್ಲಿ 15 ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಮೇಕೆ ಕದಿಯುತ್ತಿದ್ದ ಆರೋಪದ ಮೇಲೆ ದಲಿತ ಯುವಕನನ್ನು ಮಂಡಲಗಢ್ ಪ್ರದೇಶದಲ್ಲಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಲಾಗಿದೆ. ಆರಂಭದಲ್ಲಿ ಯುವಕನನ್ನು ಕೆಲವು ಗ್ರಾಮಸ್ಥರು ಚೌರಾಹಾ (ಅಡ್ಡರಸ್ತೆ) ಯಲ್ಲಿ ಥಳಿಸಿದರು. ನಂತರ, ಜನರ ಗುಂಪು ಯುವಕನನ್ನು ಮರಕ್ಕೆ ಕಟ್ಟಿ ಮತ್ತೊಮ್ಮೆ ಕೋಲುಗಳಿಂದ ಹೊಡೆದಿದ್ದಾರೆ.

ಜನರ ಹೊಡೆತಕ್ಕೆ ಯುವಕ ನೋವಿನಿಂದ ಕೂಗುತ್ತಿರುವುದು, ಮತ್ತು ತಾನು ಮೇಕೆ ಕದ್ದಿಲ್ಲ ಎಂದು ಪದೇ ಪದೇ ಹೇಳುವುದನ್ನು ವೀಡಿಯೊದಲ್ಲಿ ದಾಖಲಾಗಿದೆ.

- Advertisement -

Related news

error: Content is protected !!