Sunday, June 14, 2026
spot_imgspot_img
spot_imgspot_img

ಚಲಿಸುತ್ತಿರುವ ರೈಲಿನ ಬಾಗಿಲ ಬಳಿ ಡ್ಯಾನ್ಸ್ : ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಗಂಭೀರ

- Advertisement -
- Advertisement -

ಚಲಿಸುತ್ತಿರುವ ರೈಲಿನಲ್ಲಿ ಡ್ಯಾನ್ಸ್ ಮಾಡುವ ವೇಳೆ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಚೆನೈನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೆನ್ನೈನ ಮಾಧವರಂ ಪ್ರದೇಶದ ಅಭಿಲಾಷ್ ಗಾಯಗೊಂಡ ವಿದ್ಯಾರ್ಥಿ

ಅಭಿಲಾಷ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿದ್ದು, ಅಕ್ಟೋಬರ್ 9 ರಂದು, ಸ್ನೇಹಿತರೊಂದಿಗೆ ಪ್ರಯಾಣಿಸುವಾಗ, ಈತನು ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತು ಡ್ಯಾನ್ಸ್ ಮಾಡಿದ್ದಾನೆ. ಈ ವೇಳೆ ರೈಲಿನ ವಿದ್ಯುತ್‌ ಕಂಬವೊಂದು ಡಿಕ್ಕಿ ಹೊಡೆಯುವ ದೃಶ್ಯ ವಿಡಿಯೋದಲ್ಲಿದೆ. ರೈಲಿನಿಂದ ಹೊರಗೆ ಎಸೆಯಲ್ಪಟ್ಟ ಈತನನ್ನು ಕೂಡಲೇ ಆತನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಯಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!