Sunday, August 2, 2026
spot_imgspot_img
spot_imgspot_img

ದಸರಾ ಸಿಎಂ ಕಪ್ ಕುಸ್ತಿಗೆ ಸೆ.20ರಂದು ಆಯ್ಕೆ ಪ್ರಕ್ರಿಯೆ

- Advertisement -
- Advertisement -

ಬೆಂಗಳೂರು: ಈ ಬಾರಿ ಮೈಸೂರಿನಲ್ಲಿ ನಡೆಯಲಿರುವ ದಸರಾ ಕ್ರೀಡಾಕೂಟದಲ್ಲಿ ಸಿಎಂ ಕಪ್ ಕುಸ್ತಿಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳ ಆಯ್ಕೆಗೆ ಕುಸ್ತಿ ಪಟುಗಳನ್ನು ಆಹ್ವಾನಿಸಲಾಗಿದೆ. ಸೆ.20ರಂದು ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹಿರಿಯರ ವಿಭಾಗದ ಪುರುಷ- ಮಹಿಳಾ ಗ್ರೀಕೋರೋಮನ್ ಹಾಗೂ ಮಹಿಳಾ ವಿಭಾಗಕ್ಕೆ ಆಯ್ಕೆಪ್ರಕ್ರಿಯೆ ನಡೆಯಲಿದೆ.

ಕರ್ನಾಟಕದ ಕುಸ್ತಿಪಟುಗಳು ಮಾತ್ರ ಇಲ್ಲಿ ಭಾಗವಹಿಸಬಹುದು. ಸೇನೆ, ರೈಲ್ವೆ ಪೊಲೀಸ್ ಇಲಾಖೆಯ ಕುಸ್ತಿಪಟುಗಳಿಗೂ ಅವಕಾಶವಿದೆ ಅಂದು ಬೆಳಗ್ಗೆ 8ರಿಂದ ರವರೆಗೆ ದೇಹತೂಕ ಮಾಪನ ಮಾಡಲಾಗುತ್ತದೆ. 10 ಗಂಟೆಗೆ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ.

ಪಾಲ್ಗೊಳ್ಳುವವರು ಮೂಲ ಆಧಾರ್‌‌ ಕಾರ್ಡ್ ಮತ್ತು ಅದರ ನಕಲು ಪ್ರತಿ, ಆಯಾ ಇಲಾಖೆಯಿಂದ ಅನುಮತಿ ಪತ್ರ ಬ್ಯಾಂಕ್‌ ಖಾತೆ ವಿವರ, ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ತರಬೇಕೆಂದು ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್‌ ಶೆಟ್ಟಿ ತಿಳಿಸಿದ್ದಾರೆ.

- Advertisement -

Related news

error: Content is protected !!