Wednesday, June 24, 2026
spot_imgspot_img
spot_imgspot_img

ಅತ್ತೆಯ ಮೇಲೆ ಕುದಿಯುವ ಎಣ್ಣೆ ಸುರಿದ ಸೊಸೆ; ಅತ್ತೆ ಸೊಸೆ ಜಗಳಕ್ಕೆ ಕಾರಣವಾಯಿತು ಸರ್ಕಾರದ ಆ ಒಂದು ಯೋಜನೆ

- Advertisement -
- Advertisement -

ಹಣದ ವಿಚಾರದಲ್ಲಿ ಅತ್ತೆ ಸೊಸೆ ನಡುವೆ ನಡೆದ ಜಗಳ ತಾರಕಕ್ಕೇರಿ ಅತ್ತೆಯ ಮೇಲೆ ಸೊಸೆಯು ಕುದಿಯುವ ಎಣ್ಣೆ ಸುರಿದ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ 55 ವರ್ಷದ ಅತ್ತೆ ಲಕ್ಷ್ಮಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರದಿಂದ ಜಗನ್ ಚೆಯುತ ಯೋಜನೆಯಡಿಯಲ್ಲಿ ಬಂದ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಜಗಳ ನಡೆದಿದ್ದು, 25 ವರ್ಷದ ಸೊಸೆ ಸ್ವರೂಪ ಕುದಿಯುವ ಎಣ್ಣೆಯನ್ನು ಅತ್ತೆಯ ಮೇಲೆ ಸುರಿದಿದ್ದಾಳೆ.

ಅಲ್ಲಿನ ರಾಜ್ಯ ಸರ್ಕಾರದ ಜಗನ್​​ ಚೆಯುತಾ ಯೋಜನೆಗೆ ಅತ್ತೆ ಲಕ್ಷ್ಮಿ ಹೆಸರು ನೊಂದಾಯಿಸಿದ್ದರು. ಸ್ಕೀಮ್​​ನಲ್ಲಿ 18 ಸಾವಿರ ರೂಪಾಯಿ ಬಂದಿತ್ತು ಎನ್ನಲಾಗಿದೆ. ಇದನ್ನು ತನಗೆ ಕೊಡುವಂತೆ ಸೊಸೆ ಸ್ವರೂಪ ತಗಾದೆ ತೆಗೆದಿದ್ದಳು. ಹಣ ನೀಡಲು ಅತ್ತೆ ನಿರಾಕರಿಸಿದ ಸೊಸೆ ಬರೋಬ್ಬರಿ 2 ಗಂಟೆಗಳ ಕಾಲ ಜಗಳ ಕಾಯ್ದು ಈ ಕೃತ್ಯ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!