Thursday, April 25, 2024
spot_imgspot_img
spot_imgspot_img

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ ಬಂಧನ !

- Advertisement -G L Acharya panikkar
- Advertisement -

ಅಹಮದಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಅಬ್ದುಲ್ ಮಜೀದ್’ನನ್ನು ಇಂದು ಬಂಧಿಸಲಾಗಿದೆ.

ದಾವೂದ್ ಸಹಚರನಾದ ಅಬ್ದುಲ್ ಮಜೀದ್ ಕುಟ್ಟಿಯ ಗುಜರಾತ್ ಎಟಿಎಸ್​ ತಂಡ ಬಂಧಿಸಿದೆ.24ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಭಯೋತ್ಪಾದನಾ ನಿಗ್ರಹ ದಳ ಜಾರ್ಖಂಡ್’ನಲ್ಲಿ ಅರೆಸ್ಟ್ ಮಾಡಿದೆ.

1996ರ ಶಸ್ತ್ರಾಸ್ತ ಸಂಗ್ರಹ ಪ್ರಕರಣ ದಲ್ಲಿ 106 ಪಿಸ್ತೂಲ್, 750 ಸಿಡಿಮದ್ದುಗಳು ಮತ್ತು 4 ಕೆ.ಜಿ ಆರ್ ಡಿ ಎಕ್ಸ್ ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು ,ಆದರೆ ಅಬ್ದುಲ್ ತಲೆ ಮರೆಸಿಕೊಂಡಿದ್ದ. ಇದೀಗ ವಶಕ್ಕೆ ಪಡೆದ ಎಟಿಎಸ್ ಅಧಿಕಾರಿಗಳು ಕೊರೋನಾ ಪರೀಕ್ಷೆ ನಡೆಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!