

ಉಳ್ಳಾಲ: ರೈಲ್ವೆ ನೌಕರರಿಗೆ ನಕಲಿ ವೈದ್ಯಕೀಯ ಫಿಟ್ನೇಸ್ ಸರ್ಟಿಫಿಕೇಟ್ ನೀಡಿದ ಪ್ರಕರಣದಲ್ಲಿ ಸಿಬಿಐ ನಿಂದ ಬಂಧಿತನಾಗಿರುವ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ವಿಜಯನ್ ವಿ.ಎ ಮೃತದೇಹದ ತೊಕ್ಕೊಟ್ಟು ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

ಮಂಗಳೂರಿನಲ್ಲಿ ರೈಲ್ವೆ ಸಿಬ್ಬಂದಿಗಳಿಗೆ ನಕಲಿ ಫಿಟ್ನೇಸ್ ಸರ್ಟಿಫಿಕೇಟ್ ನೀಡುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಬಯಲಿಗೆಳೆದಿದ್ದರು. ಈ ಪ್ರಕರಣದಲ್ಲಿ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಸೇರಿದಂತೆ ಇಂದು ಆತ್ಮಹತ್ಯೆ ನಡೆಸಿದ ಫಾರ್ಮಸಿಸ್ಟ್ ವಿಜಯನ್ ಸೇರಿದಂತೆ ಇನ್ನೋರ್ವ ಅಧಿಕಾರಿಗಳನ್ನು ಅರೆಸ್ಟ್ ಮಾಡಿದ್ದರು.
ಇದೀಗ ಸಿಬಿಐ ವಶದಲ್ಲಿದ್ದ ಪ್ರಮುಖ ಆರೋಪಿ ಫಾರ್ಮಸಿಸ್ಟ್ ವಿಜಯನ್ ವಿ.ಎ ಮೃತದೇಹ ತೊಕ್ಕೊಟ್ಟು ಗಣೇಶನಗರದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ. ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ರೈಲ್ವೇ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


