Thursday, April 18, 2024
spot_imgspot_img
spot_imgspot_img

ದೆಹಲಿಯಲ್ಲಿ ಆಕ್ಸಿಜನ್ ಖಾಲಿಯಾದ ಪರಿಣಾಮ 8 ಜನ ಕೊರೊನಾ ಸೋಂಕಿತರು ಸಾವು..!

- Advertisement -G L Acharya panikkar
- Advertisement -

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ದಿನ ದಿನಕ್ಕೂ ಹದಗೆಡುತ್ತಿದೆ. ವಿಶೇಷವಾಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ಔಷಧಿಗಳ ಕೊರತೆಯಿಂದಾಗಿ ರೋಗಿಗಳು ಪರದಾಡುತ್ತಿದ್ದಾರೆ. ದೆಹಲಿ ಹೈಕೋರ್ಟ್ನಲ್ಲಿ ಇಂದು ಈ ಪ್ರಕರಣದ ವಿಚಾರಣೆಯ ವೇಳೆ, ಆಸ್ಪತ್ರೆಯಲ್ಲಿನ ಆಮ್ಲಜನಕದ ಬಿಕ್ಕಟ್ಟು ತೀವ್ರವಾಗಿದ್ದು, ಆಕ್ಸಿಜನ್ ಕೊರೆತಯಿಂದ 8 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಬಾತ್ರಾ ಆಸ್ಪತ್ರೆ ತಿಳಿಸಿದೆ.

ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿಗೆ ವೈದ್ಯಕೀಯ ಆಮ್ಲಜನಕ ಖಾಲಿಯಾದ ನಂತ್ರ ಶನಿವಾರ ಮಧ್ಯಾಹ್ನ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಒಬ್ಬ ವೈದ್ಯ ಸೇರಿದಂತೆ ಎಂಟು ಜನರು ಮಧ್ಯಾಹ್ನ 12.45ಕ್ಕೆ ನಿಧನರಾದ್ರು. ಎಂಟು ಜನರಲ್ಲಿ ಆರು ಜನರನ್ನ ಆಸ್ಪತ್ರೆಯ ಐಸಿಯು (ತೀವ್ರ ನಿಗಾ ಘಟಕ)ನಲ್ಲಿದ್ರೆ, ಇಬ್ಬರು ವಾರ್ಡ್’ಗಳಲ್ಲಿದ್ದರು. ಮೃತಪಟ್ಟ ವೈದ್ಯರನ್ನ ಗ್ಯಾಸ್ಟ್ರೋಎಂಟರಾಲಜಿ ಘಟಕದ ಮುಖ್ಯಸ್ಥ ಡಾ. ಆರ್.ಕೆ.ಹಿಮಾಥಾನಿ ಎಂದು ಗುರುತಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕ ಬಿಕ್ಕಟ್ಟಿನ ಬಗ್ಗೆ 11ನೇ ನೇರ ದಿನದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್’ಗೆ ಆಸ್ಪತ್ರೆಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಮರು ಪೂರೈಕೆ ಟ್ಯಾಂಕರುಗಳು ಮಧ್ಯಾಹ್ನ 1.30ರ ಸುಮಾರಿಗೆ ಮಾತ್ರ ಆಸ್ಪತ್ರೆಗೆ ತಲುಪಿವೆ. ಅಂದ್ರೆ, ಸುಮಾರು 230 ಗಂಭೀರ ಅಸ್ವಸ್ಥ ರೋಗಿಗಳು ಸುಮಾರು 80 ನಿಮಿಷಗಳ ಕಾಲ ಆಮ್ಲಜನಕವಿಲ್ಲದೆ ಬಳಲುತ್ತಿದ್ದಾರೆ ಎಂದರು.

‘ಮಧ್ಯಾಹ್ನ 13.45 ಕ್ಕೆ ನಮಗೆ ಆಮ್ಲಜನಕ ಖಾಲಿಯಾಯಿತು. ಪೂರೈಕೆ 1.30ಕ್ಕೆ ಬಂದಿತು. ನಾವು 1 ಗಂಟೆ 20 ನಿಮಿಷಗಳ ಕಾಲ ಆಮ್ಲಜನಕದಿಂದ ಹೊರಗುಳಿದಿದ್ದೆವು’ ಎಂದು ಆಸ್ಪತ್ರೆ ನ್ಯಾಯಾಲಯಕ್ಕೆ ತಿಳಿಸಿದೆ.

‘ನಮಗೆ ಈಗಷ್ಟೇ ಆಮ್ಲಜನಕದ ಕೊರತೆ ಇದೆ… ಪ್ರಸ್ತುತ ಕೆಲವು ಸಿಲಿಂಡರ್’ಗಳಲ್ಲಿ ಮಾತ್ರ ಆಕ್ಸಿಜನ್ ಇದೆ. ಮುಂದಿನ 10 ನಿಮಿಷಗಳಲ್ಲಿ ಅದು ಕೂಡ ಖಾಲಿಯಾಗುತ್ತದೆ. ನಾವು ಮತ್ತೆ ಬಿಕ್ಕಟ್ಟಿಗೆ ಸಿಲುಕುತ್ತಿವೆ. ದೆಹಲಿ ಸರ್ಕಾರ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಆದ್ರೆ, ಅವರ ಟ್ಯಾಂಕರ್ ಇನ್ನೂ ಸ್ವಲ್ಪ ದೂರದಲ್ಲಿದೆ ಎಂದು ನಂಬಿದೆ’ ಎಂದು ಅವರು ಹೇಳಿದರು.

ನ್ಯಾಯಾಲಯವು ದೆಹಲಿ ಸರ್ಕಾರಕ್ಕೆ ಆಮ್ಲಜನಕ, ಔಷಧಿ ಮತ್ತು ಹಾಸಿಗೆಗಳ ಲಭ್ಯತೆಯ ಕುರಿತು ಹಲವು ಪ್ರಶ್ನೆಗಳನ್ನ ಕೇಳಿತು. ಹೈಕೋರ್ಟ್ ದೆಹಲಿ ಸರ್ಕಾರವನ್ನ ಕೇಳಿದೆ – ಈ ಬಿಕ್ಕಟ್ಟಿನ ಸಮಯದಲ್ಲಿ, ಸೈನ್ಯದ ಸಹಾಯವನ್ನ ಏಕೆ ತಪ್ಪಿಸುತ್ತದೆ? ಎಂದು ಪ್ರಶ್ನಿಸಿತು.

driving

ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆಯ ವೇಳೆ, ಅಮಿಕಸ್ ಕ್ಯೂರಿ ರಾವ್ ಅವ್ರು, ಈ ಬಿಕ್ಕಟ್ಟಿನ ಘಂಟೆಯಲ್ಲಿ ದೆಹಲಿ ಸರ್ಕಾರ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಹಾಯವನ್ನ ತೆಗೆದುಕೊಳ್ಳಲು ಏಕೆ ಹಿಂಜರಿಯುತ್ತಿದೆ ಎಂಬುದು ನನ್ನ ತಿಳುವಳಿಕೆಯನ್ನು ಮೀರಿದೆ ಎಂದು ಹೇಳಿದರು. ನಿಸ್ಸಂಶಯವಾಗಿ, ನಮ್ಮ ಸೈನ್ಯವು ಆಮ್ಲಜನಕವನ್ನು ಒದಗಿಸಲು ಇತರ ಉತ್ತಮ ಆಯ್ಕೆಗಳನ್ನ ಒದಗಿಸುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಆಮ್ಲಜನಕವಿಲ್ಲದ ಹಾಸಿಗೆಗಳು ನಿಷ್ಪ್ರಯೋಜಕವೆಂದು ಹೇಳುವ ಬದಲು, ಮಿಲಿಟರಿ ಪಡೆಗಳ ನೆರವಿಗೆ ಹೋಗುವುದನ್ನು ಪರಿಗಣಿಸಬೇಕು.

- Advertisement -

Related news

error: Content is protected !!