- Advertisement -
- Advertisement -




ಚಿಕ್ಕಮಗಳೂರು: ಕಳಸ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಶವ ಭದ್ರಾ ನದಿಯಲ್ಲಿ ಪತ್ತೆಯಾಗಿದೆ.ಕಳಸ ತಾಲೂಕಿನ ಬಾಳೆಹೊಳೆ ಮೂಲದ ವಿದ್ಯಾರ್ಥಿ ಶ್ರೇಯಸ್ ಮೃತ ಬಾಲಕ.
ಮಾ.16ರಂದು ವಿದ್ಯಾರ್ಥಿ ಕಾಣೆಯಾಗಿದ್ದ. ಶಾಲೆ ಮುಗಿದ ಬಳಿಕ ಶ್ರೇಯಸ್ ಮನೆಗೆ ತೆರಳಿರಲಿಲ್ಲ.ಈ ಬಗ್ಗೆ ಪೋಷಕರು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಲ್ಲದೇ ವಿದ್ಯಾರ್ಥಿ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಆತನ ಸುಳಿವು ಸಿಕ್ಕಿರಲಿಲ್ಲ. ಮಾ.19ರಂದು ಭದ್ರಾ ನದಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
- Advertisement -








