Thursday, November 5, 2026
spot_imgspot_img
spot_imgspot_img

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಪೊಲೀಸ್‌ ಸಿಬ್ಬಂದಿ ಮೃತ್ಯು

- Advertisement -
- Advertisement -

ಬಂಟ್ವಾಳ: ಅಸೌಖ್ಯದಿಂದ ಬಳಲುತ್ತಿದ್ದ ಯುವ ಪೊಲೀಸ್ ಸಿಬ್ಬಂದಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.ಮೂಲತಃ ದಾವಣಗೆರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿದ್ದ ಅಭಿಷೇಕ್ (26) ಮೃತಪಟ್ಟ ಪೋಲೀಸ್ ಸಿಬ್ಬಂದಿಯಾಗಿದ್ದಾನೆ.

ಅವಿವಾಹಿತನಾಗಿದ್ದ ಅಭಿಷೇಕ್ ಅವರು 2020 ರಲ್ಲಿ ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯ ಎಚ್.ಸಿ.ಯಾಗಿ ನೇಮಕಗೊಂಡಿದ್ದರು. ಅ ಬಳಿಕ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ ಕಳೆದ ಒಂದು ವರ್ಷದ ಹಿಂದೆ ಬೆನ್ನುಮೂಳೆಯ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬ್ಲಡ್ ಕ್ಯಾನ್ಸರ್ ಕಂಡು ಬಂದಿತ್ತು.

- Advertisement -

Related news

error: Content is protected !!