Wednesday, April 23, 2025
spot_imgspot_img
spot_imgspot_img

ಉಪ್ಪಿನಂಗಡಿ: ನದಿಯಲ್ಲಿ ಯುವಕನ ಮೃತದೇಹ ಪತ್ತೆ

- Advertisement -
- Advertisement -

ಉಪ್ಪಿನಂಗಡಿ: ಯುವಕನೋರ್ವನ ಉಪ್ಪಿನಂಗಡಿ ದೇವಸ್ಥಾನ ಮೃತದೇಹ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಪತ್ತೆಯಾಗಿದ್ದು ಮೃತಪಟ್ಟ ವ್ಯಕ್ತಿಯನ್ನು ಉಪ್ಪಿನಂಗಡಿ ಸಮೀಪದ ಕನ್ಯಾರಕೋಡಿ ನಿವಾಸಿ ಯಾಸಿರ್(29)ಎಂದು ಗುರುತಿಸಲಾಗಿದೆ.

ಸಾವಿನ ಸುತ್ತ ಅನುಮಾನದ ಹುತ್ತ ಸುತ್ತಿಕೊಂಡಿದ್ದು ಇದೊಂದು ಮರ್ಡರ್ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.ಯಾಸಿರ್ ಓರ್ವ ಈಜುಪಟುವಾಗಿದ್ದು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ವಿಚಾರ ಅವನಿಗಿರಲಿಲ್ಲ ಮಾತ್ರವಲ್ಲ ಹೆಜ್ಜೆಗೂ ವಾಹನ ಬಳಸುವ ಯಾಸಿರ್ ನ ವಾಹನ ಉಪ್ಪಿನಂಗಡಿ ಗ್ಯಾಸ್ ಪಂಪ್ ಹತ್ತಿರ ತನ್ನ ಕಾರನ್ನು ಬಿಟ್ಟು ದೇವಸ್ಥಾನದ ಹತ್ತಿರ ನಡೆದುಕೊಂಡು ಹೋಗುವಂತಹ ವ್ಯಕ್ತಿಯೇ అల్ల ಎಂದು ಸಾರ್ವಜನಿಕರು ಮಾತಾಡುತ್ತಿದ್ದಾರೆ.

ಇದು ಯಾವುದೋ ಕ್ಷುಲ್ಲಕ್ಷ ಕಾರಣಗಳಿಗೆ ನಡೆದ ಹತ್ಯೆ ಆಗಿರಬಹುದು ಉಪ್ಪಿನಂಗಡಿಯಲ್ಲಿ ಸಿಕ್ಕಿದ ಮೃತದೇಹವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಬದಲು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಈ ನಿಟ್ಟಿನಲ್ಲಿ ಈ ಸಾವಿನ ಸುತ್ತ ಅನುಮಾನದ ಹುತ್ತ ಶುರುವಾಗಿದೆ.ನೈಜ ಕಾರಣಗಳು ಪೋಸ್ಟ್ ಮಾರ್ಟಂ ಮತ್ತು ಪೋಲೀಸರ ತನಿಖೆಯ ನಂತರವಷ್ಟೇ ಬೆಳಕಿಗೆ ಬರಬೇಕಿದೆ.

- Advertisement -

Related news

error: Content is protected !!