Friday, September 11, 2026
spot_imgspot_img
spot_imgspot_img

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯ ವೀರಾಜಪೇಟೆಯ ಹೊರ ವಲಯದ ಕೆ.ಬೋಯಿಕೇರಿಯಲ್ಲಿ ಮದುವೆಯಾಗದ ಹಿನ್ನೆಲೆ ಖಿನ್ನತೆಗೆ ಜಾರಿದ್ದ ವ್ಯಕ್ತಿಯೊಬ್ಬರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮಡಿಕೇರಿ ತಾಲೂಕಿನ ಐಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮದ ಬಿ.ಪಿ.ಅನಿಲ್ ಕುಮಾ‌ರ್ ಅಲಿಯಾಸ್ ಸತೀಶ್ (40) ಎಂದು ತಿಳಿದು ಬಂದಿದೆ.ಮರದ ಕೆಲಸ ಮಾಡುತ್ತಿದ್ದ ಸತೀಶ್, ಬಳಿಕ ಕೋವಿ ದುರಸ್ತಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಮನೆಗೆ ಬಂದು ಕೈ ಕಾಲು ತೊಳೆದು ಊಟ ಮಾಡಲು ಮುಂದಾಗಿದ್ದರು.

ಅಣ್ಣ ಮತ್ತು ತಾಯಿ ಸ್ಥಳದಲ್ಲಿದ್ದಾಗಲೇ ಏಕಾಏಕಿ ಎದ್ದು ಕೋಣೆಯೊಳಗೆ ಹೋದ ಸತೀಶ್ ಕೋಣೆಯಲ್ಲಿದ್ದ ಕೋವಿಯಿಂದ ತಲೆಗೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಆದರೆ ಸತೀಶ್ ಮದುವೆಯಾಗದ ಹಿನ್ನೆಲೆ ಆಗಾಗ ಸಾವಿನ ಮಾತುಗಳನ್ನಾಡುತ್ತಿದ್ದರು ಎನ್ನಲಾಗಿದೆ.ಈ ಕುರಿತು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!