Friday, September 4, 2026
spot_imgspot_img
spot_imgspot_img

ಪುತ್ತೂರು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮಾಜಿ ಟ್ರಸ್ಟಿ ಡಾ. ಸಿ. ನಿತ್ಯಾನಂದ ಪೈ ವಿಧಿವಶ

- Advertisement -
- Advertisement -

ಪುತ್ತೂರು: ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮಾಜಿ ಟ್ರಸ್ಟಿ ಬೊಳುವಾರು ಕರ್ಮಲ ನಿವಾಸಿ ಡಾ.ಸಿ.ನಿತ್ಯಾನಂದ ಪೈ(73ವ)ರವರು ಜ.14ರಂದು ನಿಧನರಾದರು.


ನಿತ್ಯಾನಂದ ಪೈ ಅವರು ಪುತ್ತೂರು ಬೊಳುವಾರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಪುತ್ತೂರು ಜಿಎಸ್‌ಬಿ ಅಭಿವೃದ್ದಿ ಸಭಾದ ಮಾಜಿ ಅಧ್ಯಕ್ಷರಾಗಿದ್ದು, ಸುದಾನ ಕ್ರೀಡಾ ಕ್ಲಬ್ ಸ್ಥಾಪಕರಾದ ಅವರು ಪುತ್ತೂರಿನಲ್ಲಿ ಗ್ರಾಹಕ ಕಲ್ಯಾಣ ವೇದಿಕೆ ಮೂಲಕ ಅನೇಕ ಚಟುವಟಿಕೆ ನಡೆಸಿದರು. ಪತ್ರಿಕೆಯಲ್ಲಿ ಅಂಕಣಕರಾಗಿದ್ದ ಅವರು ಗ್ರಾಹಕರ ಸಮಸ್ಯೆಗಳ ಕುರಿತು ಸುದ್ದಿಬಿಡುಗಡೆ ಸಹಿತ ಹಲವು ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಉತ್ತಮ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಮೃತರು ಪತ್ನಿ ವಾಣಿ, ಪುತ್ರಿ ಮತ್ತು ಅಳಿಯ ಹಾಗು ಮೊಮ್ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!