Wednesday, October 21, 2026
spot_imgspot_img
spot_imgspot_img

ದೆಹಲಿ: ರಾವಣನ ಜೊತೆ 30 ಅಡಿ ಎತ್ತರದ ಬೃಹತ್ ಜಿರಳೆ ಪ್ರತಿಕೃತಿ ದಹನ

- Advertisement -
- Advertisement -

ನವದೆಹಲಿ: ವಿಜಯದಶಮಿ ಹಬ್ಬದ ಅಂಗವಾಗಿ ದೆಹಲಿಯ ಪಿತಾಂಪುರದಲ್ಲಿ ನಡೆದ ರಾಮಲೀಲಾ ಮಹೋತ್ಸವದಲ್ಲಿ ರಾವಣನ ಪ್ರತಿಕೃತಿಯ ಜೊತೆಗೆ ಬೃಹತ್ ಜಿರಳೆ ಪ್ರತಿಕೃತಿಯನ್ನು ದಹಿಸುವ ಮೂಲಕ ವಿನೂತನವಾಗಿ ದಸರಾವನ್ನು ಆಚರಿಸಲಾಗಿದೆ.

ಪಿತಾಂಪುರದ ನೇತಾಜಿ ಸುಭಾಷ್ ಪ್ಲೇಸ್‌ನಲ್ಲಿರುವ ರಾಮಲೀಲಾ ಮೈದಾನದಲ್ಲಿ ಕೇಶವ್ ರಾಮಲೀಲಾ ಸಮಿತಿ ವತಿಯಿಂದ ಈ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಸಾಂಪ್ರದಾಯಿಕ ರಾವಣ ದಹನದ ಜೊತೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಸುಮಾರು 30 ಅಡಿ ಎತ್ತರದ ಜಿರಳೆ ಪ್ರತಿಕೃತಿಗೆ ಅಗ್ನಿಸ್ಪರ್ಶ ಮಾಡಿದರು.

ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ಜತೆಗೆ ‘ಜಿರಳೆ’ ಪ್ರತಿಕೃತಿಯನ್ನು ದಹಿಸಿರುವುದನ್ನು ವಿರೋಧಿಸಿ, ಆಮ್ ಆದ್ಮಿ ಪಕ್ಷದ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರು ಲೆಫ್ಟಿನೆಂಟ್ ಗವರ್ನರ್ ಹಾಗೂ ದೆಹಲಿ ಪೊಲೀಸ್ ಕಮಿಷನರ್‌ಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ. ಈ ಕೃತ್ಯವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಶ್ರೀ ಕೇಶವ್ ರಾಮಲೀಲಾ ಸಮಿತಿಯ ಆಯೋಜಕರು ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮತ್ತು ಇತರ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಭಾರದ್ವಾಜ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.

ದಸರಾ ಹಬ್ಬದ ಧಾರ್ಮಿಕ ಮತ್ತು ಪವಿತ್ರ ಪರಂಪರೆಯ ರಾಮಲೀಲಾ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ಇಂತಹ ಕೃತ್ಯವೆಸಗಲಾಗಿದೆ ಎಂದು ಆಪ್ ನಾಯಕರು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!