Thursday, April 18, 2024
spot_imgspot_img
spot_imgspot_img

“ಸೋಲೊಪ್ಪಿಕೊಂಡ ಕೆಕೆಆರ್”

- Advertisement -G L Acharya panikkar
- Advertisement -

ದುಬೈ: ಕೆಆರ್‌ ವಿರುದ್ಧದ ಶನಿವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 18 ರನ್ ಗಳಿಂದ ಜಯ ಸಾಧಿಸಿದೆ.
229 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ 20 ಓವರ್‌ಗಳಲ್ಲಿ 8 ವಿಕೆಟಿಗೆ 210 ರನ್‌ ಗಳಿಸಲಷ್ಟೆ ಶಕ್ತವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾಯಿತು.

ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಡೆಲ್ಲಿ ಕ್ಯಾಪಿಟಲ್ಸ್ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿತು. 20 ಓವರ್‌ ಮುಗಿದಾಗ 4 ವಿಕೆಟ್‌ ನಷ್ಟಕ್ಕೆ 228 ರನ್‌ ಚಚ್ಚಿತು. ಆರಂಭಿಕನಾಗಿ ಬಂದ ಪೃಥ್ವಿ ಶಾ 41 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 66 ರನ್‌ ಗಳಿಸಿದರು. ಆರಂಭಿಕ ಆಟಗಾರ ಶಿಖರ್‌ ಧವನ್‌ ತಮ್ಮ ನಿರಾಶಾದಾಯಕ ಆಟ ಮುಂದುವರಿಸಿ 26 ರನ್‌ಗೆ ವಿಕೆಟ್‌ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಶ್ರೇಯಸ್‌ ಐಯ್ಯರ್‌, ಬರೀ 38 ಎಸೆತಗಳಲ್ಲಿ ಭರ್ಜರಿ 7 ಬೌಂಡರಿ, 6 ಸಿಕ್ಸರ್‌ಗಳ ಮೂಲಕ 88 ರನ್‌ ಬಾರಿಸಿದರು. ಇದರಲ್ಲಿ 64 ರನ್‌ ಬೌಂಡರಿ, ಸಿಕ್ಸರ್‌ಗಳ ಮೂಲಕವೇ ಸಿಕ್ಕಿತು. ಆಂಡ್ರೆ ರಸೆಲ್ 29 ರನ್‌ ನೀಡಿ 2 ವಿಕೆಟ್‌ ಪಡೆದರು.

- Advertisement -

Related news

error: Content is protected !!