Monday, July 20, 2026
spot_imgspot_img
spot_imgspot_img

(ನ.21-23) ಈಜು ಫೆಡರೇಶನ್ ಆಫ್ ಇಂಡಿಯಾ 21ನೇ ನ್ಯಾಷನಲ್‌‌ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ 2025ಗೆ ಶ್ರೀಲಕ್ಷ್ಮಿ ವಿಟ್ಲ ಆಯ್ಕೆ

- Advertisement -
- Advertisement -

ಹೈದರಾಬಾದ್‌: ವಿಜಯನಗರ ಅಕ್ವಾಟಿಕ್ ಸೆಂಟರ್ ಕೊಪ್ರೊರೇಷನ್ ಸ್ವಿಮ್ಮಿಬಿಜಿ ಪೂಲ್ ಆರ್‌ಪಿಸಿ ಲೇಔಟ್ ಬೆಂಗಳೂರು ಇಲ್ಲಿ 2025 ನವೆಂಬರ್ 1 ಮತ್ತು 2ರಂದು ನಡೆದ ಕರ್ನಾಟಕ ಈಜು ಸಂಘ (ರಿ.) 25ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ 2025-26 ಈಜು ಸ್ಪರ್ಧೆಯಲ್ಲಿ ವಿಟ್ಲದ ಶ್ರೀಲಕ್ಷ್ಮಿ ವಿಟ್ಲ ಇವರು 4 ಚಿನ್ನದ ಪದಕವನ್ನು ಗೆದ್ದು, 21 ರಿಂದ 23 ನವೆಂಬರ್ 2025ರಂದು ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆಯುವ ಈಜು ಫೆಡರೇಶನ್ ಆಫ್ ಇಂಡಿಯಾ 21ನೇ ನ್ಯಾಷನಲ್‌ ಮಾಸ್ಟರ್ಸ್ ಚಾಂಪಿಯನ್‌ಶಿಪ್ 2025ಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಈಜು ಸಂಘ (ರಿ.) 25ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ 2025-26ರಲ್ಲಿ *200 ಮೀಟರ್ ವೈಯಕ್ತಿಕ ಮೆಡ್ಲೆ 1 ನೇ ಚಿನ್ನದ ಪದಕ
*100 ಮೀಟರ್ ಬಟರ್‌ಫ್ಲೈ 1 ನೇ ಚಿನ್ನದ ಪದಕ
*100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ 1 ನೇ ಚಿನ್ನದ ಪದಕ
*200*4 ಮೆಡ್ಲೆ ರಿಲೇ 1 ನೇ ಚಿನ್ನದ ಪದಕ ಗಳಿಸಿದ್ದಾರೆ.

ಶ್ರೀಲಕ್ಷ್ಮಿ ವಿಟ್ಲ ಇವರು ವಿ. ವನ್‌ ಅಕ್ವಾ ಸೆಂಟರ್ ಮಂಗಳೂರು ಇಲ್ಲಿ ಈಜು ತರಬೇತುದಾರಾಗಿದ್ದಾರೆ. ಇವರು ಗೋಪಾಲ ಸಪಲ್ಯ ಹಾಗೂ ಲೀಲಾವತಿ ದಂಪತಿಯ ಕಿರಿಯ ಪುತ್ರಿ.

- Advertisement -

Related news

error: Content is protected !!